ದೇಶದ ಸದೃಢತೆಗೆ ಯುವ ಶಕ್ತಿ ಸನ್ನದ್ದವಾಗಬೇಕು; ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್
ಸಂಜೆವಾಣಿ ವಾರ್ತೆ
 ದಾವಣಗೆರೆ.ಜು.೨೧; ದೇಶದ ಸದೃಢತೆಗೆ ಯುವ ಶಕ್ತಿಗಳು ಸನ್ನದ್ದರಾಗಿ ಸಮಾಜ ಘಾತಕ ಶಕ್ತಿಗಳ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬೇಕೆಂದು ಎಂದು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.ಅವರು  ಜಿಲ್ಲಾ ಪೆÇಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ, ದೇಶವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಗತಿಯತ್ತ ಸಾಗಲು ಸಹಾಯ ಮಾಡುವ ಶಕ್ತಿ ಹೊಂದಿದ್ದಾರೆ. ದೇಶದೊಳಗೆ ಸಾಮಾಜಿಕ ಸುಧಾರಣೆ ತರುವ ಜವಾಬ್ದಾರಿಯೂ ಸಹ ಯುವಕರ ಮೇಲಿದೆ ಎಂದು ತಿಳಿಸಿದರು.ಯುವ ಜನರು ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ವ್ಯಯಮಾಡುವ ಮೂಲಕ ತಮ್ಮ ಉತ್ತಮ ಭವಿಷ್ಯಕ್ಕೆ ಮೀಸಲಾದ ಸಮಯವನ್ನಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ದೈಹಿಕವಾಗಿ  ಮಾತ್ರವಲ್ಲ, ಅವರ ಮಾನಸಿಕ ಆರೋಗ್ಯವನ್ನು ಹದಗೆಡಿಸುವುದಲ್ಲದೆ ತಮ್ಮ ಕುಟುಂಬದ ಆರ್ಥಿಕತೆ ಹಾಗೂ ಸಮಾಜದ ಆರ್ಥಿಕತೆ ಮೇಲೆ ನಷ್ಟ ತರುತ್ತದೆ ಎಂದು ತಿಳಿಸಿದರು. ಪ್ರಗತಿ ಮತ್ತು ನಾವೀನ್ಯತೆಯನ್ನು ತರಲು ಸಾಕಷ್ಟು ಸಾಮಥ್ರ್ಯವನ್ನು ಹೊಂದಿರುವ ದೇಶದÀ ಯುವಕರಲ್ಲಿ ಆಡಳಿತವನ್ನು ಬದಲಾಯಿಸುವ ಕ್ರಿಯಾತ್ಮಕ ಶಕ್ತಿಯು ಇದೆ. ದೇಶದ ಉಜ್ವಲತೆ ಮತ್ತು ಉತ್ತುಂಗಕ್ಕೆ ಕೊಂಡೊಯ್ಯಲು ಅವರ ಶಕ್ತಿ, ಆಲೋಚನೆಗಳು ಮತ್ತು ನಾವೀನ್ಯತೆ ಇಂದಿನ ಅಗತ್ಯವಾಗಿದೆ.