ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ
ವಿಜಯಪುರ.ಜು.೨೧-ಪೋಷಕರು ಏನೇ ತೊಂದರೆ ಇದ್ದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸರಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಕರ್ ಹಡಪದ್ ತಿಳಿಸಿದರು.
ಇವರು ಸಮೀಪದ ನಾರಾಯಣಪುರ ಗ್ರಾಮದ ಸರಕಾರಿ ಫ್ರೌಡಶಾಲೆಯಲ್ಲಿ ಶುಕ್ರವಾರದಂದು ತಾಲೂಕು ಶರಣ ಸಾಹಿತ್ಯ ಪರಿಷತ್ತುವತಿಯಿಂದ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು ವಿತರಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ದಾಖಲಾತಿಯನ್ನು ಆಯಾ ಶಾಲೆಗಳ ಎಸ್‌ಡಿಎಂಸಿ ಹಾಗೂ ಶಾಲಾ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಮುತುವರ್ಜಿ ವಹಿಸಬೇಕು. ಸರಕಾರಿ ಶಾಲೆಗಳ ಕಡೆಗೆ ಮಕ್ಕಳನ್ನು ಸೆಳೆಯುವುದು ಮಾತ್ರವಲ್ಲ ಅಲ್ಲಿನ ಸೌಲಭ್ಯಗಳ ಬಗ್ಗೆಯು ಪೋಷಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಕ್ಕಳಿಗೆ ನೀಡುವ ಉಡುಗೊರೆ ಶಿಕ್ಷಣ: ನಾವು ಜೀವನದಲ್ಲಿ ಏನೇ ಸಾಧಿಸಿದರೂ, ಎಷ್ಟೆ? ಎತ್ತರಕ್ಕೆ ಹಾಗೂ ಉನ್ನತ ಸ್ಥಾನಕ್ಕೆ ಏರಬೇಕಾದರೆ, ಅದಕ್ಕೆ ಮುಖ್ಯ ಕಾರಣ ತಾಯಿ. ಹಾಗೇ ಹೆತ್ತವರು ಮಕ್ಕಳಿಗೆ ನೀಡುವ ಅತ್ಯುತ್ತಮ ಉಡುಗೊರೆ ಶಿಕ್ಷಣವಾಗಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ i..ಸುರೇಶ್ ಬಾಬು ಮಾತನಾಡಿ, ಪೋಷಕರೂ ಕೂಡ ಮಕ್ಕಳ ಪುಸ್ತಕ ಪ್ರೇಮ ಬೆಳೆಸಲು ಪೂರಕವಾಗಿ ಸ್ಪಂದಿಸಬೇಕು. ಅಂದರೆ ಉತ್ತಮವಾದ ಓದಿಗೆ ಎಲ್ಲಾ ರೀತಿಯ ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು. ನಿಮ್ಮ ಮಕ್ಕಳಿಗೆ ಏನಾದರೂ ಉಡುಗೊರೆ ಕೊಡುವ ಅಭ್ಯಾಸ ಇಟ್ಟುಕೊಂಡಿದ್ದರೆ, ಪುಸ್ತಕವನ್ನೇ ಕೊಡಿ. ಮಕ್ಕಳೂ ಕೂಡ ಓದಿನ ಮೂಲಕವೇ ಸಂಪೂರ್ಣವಾದ ಓದು ಬರಹದ ಕೌಶಲ ಮಾತ್ರವಲ್ಲ, ಕ್ರಿಯಾಶೀಲ ಯೋಚನಾ ವಿಧಾನವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.
ಮುಖ್ಯಶಿಕ್ಷಕ ಕೋಟ್ರೇಶ್ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಉತ್ತಮ ವಿದ್ಯಾಭ್ಯಾಸ ಕಲಿಯಲೆಂದು ಸರಕಾರದಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯಗಳ ಜೊತೆಗೆ ಧಾನಿಗಳ ಸಹಾಯ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ ಮಕ್ಕಳು ಹೆಚ್ಚಿಗೆ ಸರಕಾರಿ ಶಾಲೆಗಳಿಗೆ ದಾಖಲಾತಿ ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸಕ್ಕೆ ಒತ್ತು ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತು ಸದಸ್ಯರಾದ ಭಾರತಿ ಜಗದೀಶ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರೂಪ, ಗ್ರಾಮ.ಪಂ.ಸದಸ್ಯ ಮುರುಳಿ, ಕೋಮಲ ಬಸವರಾಜು, ಶಿಕ್ಷಕರಾದ ಕನ್ನಡ ಸಹಶಿಕ್ಷಕ ಗಂಗರಾಜು, ದೈಹಿಕ ಶಿಕ್ಷಕ ಬಾಲಚಂದ್ರ, ಅಂಜನೇಯ್ಯರೆಡ್ಡಿ, ಎನ್.ಸುಷ್ಮ, ಎಂ.ವೆಂಕಟೇಶಪ್ಪ, ಡಿ.ಯಾಸ್ಮಿನ್, ಎಲ್.ಸೌಂದರ್ಯ, ವಿದ್ಯಾರ್ಥಿಗಳು ಹಾಜರಿದ್ದರು.