ಕ್ರೀಡಾ ಇಲಾಖೆಯ ನಿರ್ದೇಶಕಿ ಗೀತಾರಿಗೆ ಅಭಿಂದನೆ
ಕೋಲಾರ,ಜು.೨೧- ನಗರದ ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಕ್ರೀಡಾಪಟುಗಳು ಹಾಗೂ ವಾಕಿಂಗ್‌ದಾರರ ವೇದಿಕೆಯಿಂದ ಕ್ರೀಡಾಂಗಣದ ಒಳಗೆ ವಾಕಿಂಗ್ ಮಾಡಲು ಅವಕಾಶ ಮಾಡಿಕೊಟ್ಟ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಿಗೆ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಸಿ, ಕ್ರೀಡಾಪಟುಗಳಿಗೆ ಹಾಗೂ ವಾಕಿಂಗ್‌ದಾರರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಮನವಿ ಮಾಡಲಾಯಿತು.
ವೇದಿಕೆ ವತಿಯಿಂದ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಸಹಾಯಕ ನಿರ್ದೇಶಕರ ಅವಗಾಹನೆಗೆ ತರಲಾಯಿತು.
ನಮ್ಮ ಮನವಿಗೆ ಸ್ಪಂದಿಸಿ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ತಮ್ಮಂತಹ ವೇದಿಕೆಗಳ ಸಹಕಾರ, ಸಹಾಯ ಹಾಗೂ ಕೊಡುಗೆ, ಹೆಚ್ಚಿನ ಅವಶ್ಯಕತೆ ಇದೆ ಇನ್ನು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರ ಹಾಗೂ ದಾನಿಗಳ ಸಹಾಯ ಪಡೆದು ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯಗಳು ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿ ಕ್ರೀಡಾಂಗಣವನ್ನಾಗಿ ಮಾಡಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವೆಂದು ತಿಳಿಸಿದರು.
ಮುಂದುವರೆದು ಕ್ರೀಡಾಂಗದಲ್ಲಿ ನಡೆಯುವ ಅಗತ್ಯ ಕಾರ್ಯಕ್ರಮ ಹಾಗೂ ಸಭೆಗಳಿಗೆ ವೇದಿಕೆಯ ಪದಾಧಿಕಾರಿಗಳಿಗೆ ಆಹ್ವಾನ ನೀಡಲಾಗುವುದೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ವೆಂಕಟಶಿವಪ್ಪ, ಗೌರವಾಧ್ಯಕ್ಷ ಎ.ಸಿ.ರಾಜಣ್ಣ, ಉಪಾಧ್ಯಕ್ಷ ಎನ್.ನಾರಾಯಣಸ್ವಾಮಿ, ಜಿ.ಸದಾಶಿವ, ಕಾನೂನು ಸಲಹೆಗಾರ ಎ.ವಿ.ಆನಂದ್, ಪ್ರಧಾನ ಪೋಷಕರಾದ ಕೆ.ಆರ್.ಬೈಚೇಗೌಡ, ಖಜಾಂಚಿ ಕೆ ಬಾಬು, ಸಂಘಟನಾ ಕಾರ್ಯದರ್ಶಿಗಳಾದ ಯು.ಗೋವಿಂದ್, ವಿಜಿಕುಮಾರ್, ಕೆ.ಎಮ್.ಗಣೇಶ್, ಕ್ರೀಡಾ ಕಾರ್ಯದರ್ಶಿ ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ರಾಜಕುಮಾರ್ ಹಾಗೂ ವೇದಿಕೆಯ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಿದರು.