ನವೀನಾ ಗೈಡ್ಸ್ ವಿಭಾಗದ ನೂತನ ಆಯುಕ್ತ
ಕೋಲಾರ,ಜು.೨೧- ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿಯ ಗೈಡ್ಸ್ ವಿಭಾಗದ ನೂತನ ಆಯುಕ್ತರನ್ನಾಗಿ, ನಗರದ ಮಹಿಳಾ ಸಮಾಜ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ನವೀನಾ ಎಂ. ಅವರನ್ನು ನೇಮಕ ಮಾಡಿ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಗೈಡ್ ಸಂಸ್ಥೆಯ ನೂತನ ಜಿಲ್ಲಾ ಆಯುಕ್ತರಾಗಿ ಆಯ್ಕೆಯಾಗಿರುವ ಎಂ.ನವೀನ ಅವರಿಗೆ ಆದೇಶ ಪತ್ರವನ್ನು ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ಯ ಕೆ.ವಿ.ಶಂಕರಪ್ಪ, ಬಿ.ಬಿ.ಎಂ.ಪಿ.ನೋಡಲ್ ಅಧಿಕಾರಿ ಚಲಯ್ಯ, ಜಿಲ್ಲಾ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಎಂ.ವಿ.ಜನಾರ್ಧನ್, ಮುನಿನಾರಾಯಣಪ್ಪ, ಇಂಚರ ನಾರಾಯಣಸ್ವಾಮಿ, ಸುರೇಶ್, ವಿಠಲರಾವ್, ಉಮಾದೇವಿ, ರವಿ ಶಿಕ್ಷಣ ಸಂಸ್ಥೆಯ ನಿರ್ದೆಶಕ ನರೇಶ್ ಬಾಬು ಇನ್ನಿತರರು ಉಪಸ್ಥಿತರಿದ್ದರು.