ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣದ ವಿರುದ್ದ ಪ್ರತಿಭಟನೆ
ಕೋಲಾರ,ಜು,೨೧- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಹಿಂದೆಂದು ಕಾಣದಂತ ಪರಿಶಿಷ್ಟರ ಪಾಲಿನ ಅನುದಾನ ಲೂಟಿ, ಹಗಲು ದರೋಡೆಗಳಾಗಿದ್ದು ಈಗಾಗಲೇ ಹಗರಣದ ಸಂಬಂಧವಾಗಿ ತನಿಖೆ ಮುಗಿಸಿ ಅರೋಪಿಗಳನ್ನು ಜೈಲಿಗೆ ಕಳುಹಿಸ ಬೇಕಾಗಿತ್ತು. ಅದರೆ ಬೇಲಿಯೇ ಎದ್ದು ಹೊಲ ಮೇಯ್ದೆದಿರುವ ಹಿನ್ನಲೆಯಲ್ಲಿ ತನಿಖೆಯು ಅಮೆವೇಗದಲ್ಲಿ ಸಾಗುತ್ತಿರುವ ಮೂಲಕ ವಿಳಂಭ ನೀತಿಯನ್ನು ಪಾಲನೆ ಮಾಡುತ್ತಿರುವುದನ್ನು ವಿರೋಧಿಸಿ ಜು,೨೨ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವನದಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಹದ್ದು ಮೀರಿದ ವ್ಯಾಪಕ ಸುಳ್ಳು ಜಾತಿ ಪ್ರಮಾಣ ಪತ್ರ ಖಂಡಿಸಿ ಹಾಗೂ ನಿಗಮದ ಕುಂಠಿತ ಅಭಿವೃದ್ದಿ ಕಾರ್ಯಕ್ರಮಗಳು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಮಗ್ರ ಶೈಕ್ಷಣಿಕ ಸಮಾಜಿಕ-ಅರ್ಥಿಕ ಸಬಲೀಕರಣ ಕಾರ್ಯಕ್ರಮಗಳಿಗೆ ಹಿಂದಿನ ಉಳಿಕೆ ಹಾಲಿ ಅವಶ್ಯ ಅನುದಾನ ಬಿಡುಗಡೆಗೆ ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ೧೮೭ ಕೋಟಿ ರೂ ಹಗರಣದಲ್ಲಿ ಈಗಾಗಲೇ ೯೪.೭೩ ಕೋಟಿ ರೂ ನಿಗಮಕ್ಕೆ ವರ್ಗಾವಣೆ ಮಾಡಲಾಗಿದ್ದು, ಉಳಿದ ಹಣ ೯೨,೨೭ ಕೋಟಿ ರೂ ಮೊತ್ತದ ಕುರಿತು ತನಿಖೆ ಹಂತದಲ್ಲಿದೆ. ಪ್ರಸ್ತುತ ಬಜೆಟ್‌ನಲ್ಲಿ ೧೮೭ ಕೋಟಿ ರೂಗಳನ್ನು ನಿಗಮಕ್ಕೆ ಬಿಡುಗಡೆ ಮಾಡಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡ ಸಮುದಾಯದ ಅನುದಾನವನ್ನು ಲೋಟಿ ಮಾಡಲಾಗಿದೆ ಎಸ್.ಸಿ.ಎಸ್.ಟಿ. ಸಮುದಾಯದ ಅನುದಾನ ಹಗರಣದಲ್ಲಿ ಶಾಮೀಲಾಗಿದ್ದ ಅರೋಪಿಗಳು ಜಾಮೀನು ಪಡೆದು ಕೊಂಡು ಇಲಾಖೆಯಲ್ಲಿ ಮೇಲ್ದರ್ಜೆಗೆ ಬಡ್ತಿ ಪಡೆದು ಕೊಂಡು ಬೇರೆ ಕಡೆ ವರ್ಗಾವಣೆ ಮಾಡಿಸಿ ಕೊಂಡು ಆರಾಮವಾಗಿದ್ದಾರೆ. ಈ ಹಗರಣದ ಪ್ರಕರಣವನ್ನು ಉದ್ದೇಶ ಪೂರ್ವಕವಾಗಿ ಅರೋಪಿಗಳಿಗೆ ಪೂರಕವಾಗಿ ದಾಖಲು ಮಾಡುವ ಮೂಲಕ ಅನುಕೊಲ ಮಾಡಿ ಕೊಡಲಾಗಿದೆ. ಈ ಪ್ರಕರಣವನ್ನು ಪರಿಶಿಷ್ಟಜಾತಿ ಮತ್ತು ಪಂಗಡದ ದೌರ್ಜನ್ಯ ಪ್ರಕರಣ ಮಾಡುವ ಮೂಲಕ ಅರೋಪಿಗಳಿಗೆ ಜಾಮೀನು ರಹಿತ ಶಿಕ್ಷೆಯಾಗುವಂತೆ ಪ್ರಕರಣವನ್ನು ಮರು ದಾಖಲು ಮಾಡಬೇಕೆಂದು ಹೇಳಿದರು.
ಎಸ್.ಸಿ.ಎಸ್.ಟಿ. ಅಭಿವೃದ್ದಿ ನಿಗಮದಲ್ಲಿನ ೧೪,೭೩೬ ಕೋಟಿ ರೂಗಳ ದುರ್‍ಬಳಕೆ ಮಾಡಿಲ್ಲ ಎಂದು ಸರ್ಕಾರ ಹೇಳಲಾಗುತ್ತಿದೆ ಇದರಲ್ಲಿ ೧೦ ಸಾವಿರ ರೂ ವಾಪಾಸ್ ಪಡೆದಿದೆ ಎನ್ನಲಾಗಿದೆ ಹಾಗಾಗಿ ಒಟ್ಟು ೨೫ ಸಾವಿರ ಕೋಟಿ ರೂಗಳ ಅಭಿವೃದ್ದಿ ಅನುದಾನವನ್ನು ಸದ್ಬಳಿಸ ಬೇಕಾಗಿದೆ. ಇದಕ್ಕೆ ಪೂರಕವಾದ ಕ್ರಿಯಾ ಯೋಜನೆಗಳನ್ನು ರೂಪಿಸಿದೆ ಅದರೆ ಇದು ಕೊಟ್ಟ ಹಾಗೆ ಮಾಡಿ ಪುನಃ ಕಸಿಯುವ ಯೋಜನೆಯಾಗಿದೆ ಎಂದು ದೂರಿದರು
ವಾಲ್ಮೀಕಿ ಭವನದ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಎದುರಾಳಿಗಳು ತಡೆಯಾಜ್ಞೆ ತಂದಿದ್ದಾರೆ ಅದನ್ನು ತೆರವು ಗೊಳಿಸಿ ಒತ್ತುವರಿ ತೆರವು ಮಾಡಿಸ ಬೇಕು, ಜೊತೆಗೆ ಭವನದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸ ಬೇಕೆಂದು ಒತ್ತಾಯಿಸಿದರು.
ಅಂದು ಜಿಲ್ಲಾಧಿಕಾರಿಗಳು ಅತುರದಿಂದ ಉದ್ಘಾಟನೆ ಮಾಡಿಸಿದರು ಇದಕ್ಕೆ ನಾವುಗಳು ಜಿಲ್ಲಾಧಿಕಾರಿಗಳ ಒತ್ತಾಯದ ಮೇರೆಗೆ ಒಪ್ಪಿದ್ದೇವು ಒತ್ತುವರಿ ತೆರವು ಮಾಡಿಸದೆ ಕಾಮಗಾರಿಗಳು ಪೂರ್ಣಗೊಳಿಸದೆ ಉದ್ದಾಟಿಸಿದ್ದು ನಮಗೆ ಯಾರಿಗೂ ಸಮಾಧಾನಕರವಾಗಿರಲಿಲ್ಲ ಎಂದು ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ನಾಯಕ್, ಜಿಲ್ಲಾಧ್ಯಕ್ಷ ಎಂ.ಎನ್.ನಾಗರಾಜ್, ಮುಖಂಡರಾದ ವೆಂಕಟೇಶ್, ಶ್ಯಾಮ್ ನಾಯಕ್, ಬಾಬು, ನಾರಾಯಣಸ್ವಾಮಿ ಹಾಗೂ ನಾಯಕ್ ಉಪಸ್ಥಿತರಿದ್ದರು,