ಶ್ರೀ ಕನ್ಯಕಾಪರಮೇಶ್ವರಿ ದೇವಿಗೆ ಶಾಕಾಂಬರಿ ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಜು.೨೦ : ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಿಗೆ ಆಷಾಢ ಶುಕ್ರವಾರದ ಪ್ರಯುಕ್ತ ವಿವಿಧ ತರಕಾರಿಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜಿಸಲಾಗಿತ್ತು.ಬೆಳಗಿನ ಜಾವದಲ್ಲಿ ಅಭಿಷೇಕ, ಪುಷ್ಪಾರ್ಚನೆ, ಅಷ್ಟೋತ್ತರ, ಶಾಕಾಂಬರಿ ಪೂಜೆ, ಮಹಾಮಂಗಳಾರತಿ ಜರುಗಿತು. ಶ್ರೀ ಕನ್ಯಕಾಪರಮೇಶ್ವರಿ ದೇವಿಗೆ ಸೋರೆಕಾಯಿ ಚೌಳಿಕಾಯಿ ಬೀನ್ಸು ಮೆಣಸಿನಕಾಯಿ ಟೊಮೇಟೊ ಆಲೂಗಡ್ಡೆ ಕರಿಬೇವು ಗಜ್ಜರೆ ಹೀರೆಕಾಯಿ ಮೂಲಂಗಿ ವಟಾಣಿ ಮುಂತಾದ ತರಕಾರಿಗಳಿಂದ ಅಲಂಕರಿಸಿದ್ದರು. ಅಂದಾಜು 5-6ಸಾವಿರ ರೂಪಾಯಿಗಳ ಮೌಲ್ಯದ ತರಕಾರಿಗಳು ಎಂದು ದೇವಸ್ಥಾನದ ಅರ್ಚಕರಾದ ಕಿಶೋರ್ ನಾಗರಾಜ ಕುಲಕರ್ಣಿ ತಿಳಿಸಿದ್ದಾರೆ. ಪೂಜೆಯನ್ನು ಇಳಿಸಿದ ನಂತರ ಈ ತರಕಾರಿಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವರು.ಆರ್ಯ ವೈಶ್ಯ ಮಹಿಳಾ ಸಂಘ ಹಾಗೂ ವನಿತಾ ಸಂಘದವರಿಂದ ಪಾರಾಯಣ ಹಾಗೂ ತರಕಾರಿ ಅಲಂಕಾರದ ಪೂಜೆ ಸೇವೆ ಸಲ್ಲಿಸಿದ್ದರು.