ರೈತರ ಧರಣಿ ಸ್ಥಳಕ್ಕೆ ಸಂಸದ ಗೋವಿಂದ ಕಾರಜೋಳ ಭೇಟಿ
ಸಂಜೆವಾಣಿ ವಾರ್ತೆ
ಹಿರಿಯೂರು ಜು. 20 – ನೀರಿಗಾಗಿ ಆಗ್ರಹಿಸಿ ತಾಲೂಕಿನ ಜೆಜಿ ಹಳ್ಳಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹವು 32ನೇ ದಿನಕ್ಕೆ ತಲುಪಿದ್ದು ಚಿತ್ರದುರ್ಗ ಜಿಲ್ಲಾ ಸಂಸದರಾದ ಗೋವಿಂದ್ ಕಾರಜೋಳ್ ರವರು ಭೇಟಿ ನೀಡಿದರು, ಅವರಿಗೆ ಚಳುವಳಿಯ ಉದ್ದೇಶವನ್ನು ತಿಳಿಸುತ್ತಾ ಮಾತನಾಡಿದ ಕೆ ಟಿ ತಿಪ್ಪೇಸ್ವಾಮಿ ಜೆಜಿ ಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ತುಂಬಿಸಬೇಕು ಮತ್ತು ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ನೀರು ಇಡಬೇಕು ಹಾಗೂ ಕೇಂದ್ರ ಸರ್ಕಾರದಿಂದ 5 300 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು  ಸರ್ಕಾರವನ್ನು ಒತ್ತಾಯಿಸಿ ಅನಿರ್ಧಿಷ್ಟ ಧರಣಿ ಸತ್ಯಾಗ್ರವನ್ನು ಹಮ್ಮಿಕೊಂಡಿದ್ದೇವೆ  ತಾವುಗಳು ಭಾರಿ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದೀರಿ ನಿಮಗೆ ಈ ಭಾಗದಿಂದ ಬಹುದೊಡ್ಡ ಮತಗಳಿಂದ ಬೆಂಬಲಿಸಿದ್ದೇವೆ. ಆದ್ದರಿಂದ ತಾವುಗಳು ಕಲ್ಲವಳ್ಳಿ ಭಾಗದ ರೈತರು ತುಂಬಾ ಕಷ್ಟದಲ್ಲಿದ್ದಾರೆ ಅಂತರ್ಜಲ ಸಂಪೂರ್ಣ ಕುಸಿತದಿಂದ ಕುಡಿವ ನೀರಿಗೆ ಆಹಾಕಾರ ಉಂಟಾಗಿ ಬೋರ್ವೆಲ್ ಗಳು ಸಂಪೂರ್ಣವಾಗಿ ಬತ್ತಿ ಹೋಗಿ ಅಡಿಕೆ ತೋಟಗಳು ಒಣಗಿ ಹೋಗಿವೆ ಆದ್ದರಿಂದ ತಾವುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯತೆ ತೆಗೆದುಕೊಂಡು ಈ ಭಾಗದ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಮನವಿ ಮಾಡಿದರು. ಮನವಿ ಆಲಿಸಿದ ಸಂಸದರು  ನಿಮ್ಮ ಹೋರಾಟ ಅರ್ಥಪೂರ್ಣವಾಗಿದ್ದು ನ್ಯಾಯಯುತ  ಬೇಡಿಕೆಯಾಗಿದೆ ನಾನು ಕೂಡಲೇ ಮುಖ್ಯಮಂತ್ರಿಗಳಿಗೆ ಮತ್ತು ನೀರಾವರಿ ಮಂತ್ರಿಗಳಿಗೆ ಹಾಗೂ ಉಸ್ತುವಾರಿ ಮಂತ್ರಿಗಳಿಗೆ ಪತ್ರ ಬರೆದು ಶೀಘ್ರದಲ್ಲೇ ಈ ಭಾಗಕ್ಕೆ ನೀರು ತುಂಬಿಸುವ ಬಗ್ಗೆ ರೈತರೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದು ಕೊಂಡು ಕೇಂದ್ರ ಸರ್ಕಾರದಿಂದ 50% ಮತ್ತು ರಾಜ್ಯ ಸರ್ಕಾರದಿಂದ 50% ಅನುದಾನ ಬಳಸಿ ಈ ಭಾಗಕ್ಕೆ ನೀರು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರಲ್ಲದೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ಫೋನ್ ಮೂಲಕ ಸಂಪರ್ಕಿಸಿ ಈ ಭಾಗದ 16 ಕೆರೆಗಳ  ಮಾಹಿತಿ ತೆಗೆದುಕೊಂಡು   ನೀರಿನ ಪ್ರಮಾಣ ಎಷ್ಟು ಬೇಕು ಎಂದು ನಿಖರವಾದ ಮಾಹಿತಿ ತೆಗೆದುಕೊಂಡು ಕೊಡಲು ಸೂಚಿಸಿದರು. ನಂತರ ನೀವು ಶಾಂತಿಯಾಗಿ ಗಾಂಧೀಜಿ ಹಾಕಿ  ಕೊಟ್ಟ ಮಾರ್ಗದಲ್ಲಿ ಚಳುವಳಿ ಹೋರಾಟವನ್ನು ಮಾಡಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ ಎಂದು ಸಲಹೆ ನೀಡಿದರು