ದಾವಣಗೆರೆಯಲ್ಲಿ ಸಂಸ್ಕಾರ ಭಾರತೀ ಶಿವಮೊಗ್ಗ ವಿಭಾಗದ ಬೈಠಕ್
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೦: ಸಂಸ್ಕಾರ ಭಾರತೀ ಶಿವಮೊಗ್ಗ ವಿಭಾಗದ ಬೈಠಕ್ ಅನ್ನು ದಾವಣಗೆರೆ ವಿದ್ಯಾನಗರ  ಲಯನ್ಸ್ ಸೇವಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.ಸಭೆಯಲ್ಲಿ ಪ್ರಾಂತದ ಸಂಘಟನಾ ಕಾರ್ಯದರ್ಶಿ ಶ್ರೀರಾಮಚಂದ್ರಜಿ ಅವರು ಸಂಘಟನೆಯ ಧ್ಯೇಯೋದ್ದೇಶ, ಕಾರ್ಯಚಟುವಟಿಕೆಗಳ ಕುರಿತು ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ. ಕೆ. ರಾಜೀವ ಲೋಚನ ಬೈಠಕ್ ನ ಉದ್ದೇಶವನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪ್ರಸ್ತುತಪಡಿಸಿದಋರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸಹನಾ ರವಿ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ದಿಳ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.ಪ್ರಾಂತೀಯ ಪ್ರಮುಖರು ವಿಭಾಗದ ಪ್ರಮುಖರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ  ಮಾರ್ಗದರ್ಶನ ನೀಡಿದರು.ಸಭೆಯಲ್ಲಿ  ಈವರೆಗೆ ಆಗಿರುವ ಸದಸ್ಯತ್ವ ನೋಂದಣಿ, ಯುಗಾದಿ ಕಾರ್ಯಕ್ರಮ, ಮಾಸಿಕ ಬೈಠಕ್, ವಾರ್ಷಿಕ ಸರ್ವ ಸದಸ್ಯರ ಸಭೆಯ ದಿನಾಂಕದ ನಿರ್ಧಾರ ಹಾಗೂ ಗುರು ಪೂರ್ಣಿಮಾ ಕಾರ್ಯಕ್ರಮ ಕುರಿತು ಮಾಹಿತಿ ಪಡೆದರು. ದಾವಣಗೆರೆ ಘಟಕದ ಖಜಾಂಚಿ ಗೋಪಾಲಕೃಷ್ಣ ಹಾಗೂ ಚಿತ್ರದುರ್ಗ ಘಟಕದ ಖಜಾಂಚಿ ಉಮೇಶ್ ತುಪ್ಪದ್ ವರದಿ ನೀಡಿದರು.ಇದಲ್ಲದೆ ಮಹತ್ವವಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿತವಾದ ಪ್ರಮುಖ ಅಂಶಗಳನ್ನು ಕುರಿತು ಮಾಹಿತಿ ಶ್ರೀರಾಮಚಂದ್ರಜಿ  ತಿಳಿಸಿದರು. ಸಭೆಗೆ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಅಧ್ಯಕ್ಷರು , ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಖಜಾಂಚಿ ಮತ್ತು ಸದಸ್ಯರು ಆಗಮಿಸಿದ್ದರು.ಆರಂಭದಲ್ಲಿ ದಾವಣಗೆರೆ ಘಟಕದ ಸಂಗೀತಾ ವಿಧಾ ರುದ್ರಾಕ್ಷಿ ಬಾಯಿ ಧ್ಯೇಯಗೀತೆ ಹಾಡಿದರು. ಉಪಾಧ್ಯಕ್ಷೆ ಸಹನಾ ರವಿ ಸ್ವಾಗತಿಸಿದರು. ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಮಾರುತಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ರಾಜಶೇಖರ್ ಬೆನ್ನೂರು ವಂದಿಸಿದರು. ಸಾಹಿತ್ಯ ವಿಧಾ ವಿವೇಕಾನಂದ ಸ್ವಾಮಿ ಸಹಕರಿಸಿದರು.