ವಿತರಕರ ರಾಜ್ಯ ಸಮ್ಮೇಳನದ ಲಾಂಛನ ಅನಾವರಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಜೆವಾಣಿ ವಾರ್ತೆ
ಬೆಂಗಳೂರು.ಜು.೨೦: ವಿಧಾನಸೌಧದ ಮೊದಲನೇ ಮಹಡಿಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿತರಕರ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದರು ಹಾಗೂ ವಿಧಾನಸೌಧದ ಪಡಸಾಲೆಯಲ್ಲಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕಛೇರಿಯಲ್ಲಿ ಸೆಪ್ಟೆಂಬರ್ 8 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ 4 ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ರವರು ಅನಾವರಣ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲೆಂದು ಆಶಿಸಿದರು.ಈ ಸಂದರ್ಭದಲ್ಲಿ ಕ ಕಾ ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕ ರಾ ಪ ವಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಂಭುಲಿಂಗ ಕೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾದೂರು ವಾಸುದೇವ ತುಮಕೂರು ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘದ ಅಧ್ಯಕ್ಷ ಚಲುವರಾಜು ನಿರ್ದೇಶಕ ಯೋಗೀಶ್ ಹೆಚ್ ಪಿ ಚಿತ್ರದುರ್ಗ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ/ವಿತರಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಎಸ್ ಉಪಾಧ್ಯಕ್ಷರಾದ ಕುಬೇಂದ್ರಪ್ಪ ಆರ್ ಮೋಹನ್ ಕುಮಾರ್ ಕಾರ್ಯದರ್ಶಿಗಳಾದ ಆರ್ ಪ್ರಶಾಂತ್ ನಿರ್ದೇಶಕರುಗಳಾದ ಭೀಮಸಮುದ್ರ ವೇದಮೂರ್ತಿ ಮಂಜುನಾಥ್ ನಾಯ್ಡು ಪಾಲಯ್ಯ ಪಿ ಸುನೀಲ್ ಕವಾಡಿಗರಹಟ್ಟಿ ಇದ್ದರು.