ಪಿಂಜಾರ ಅಭಿವೃದ್ದಿ ನಿಗಮಕ್ಕೆ ಅನುದಾನ ಒದಗಿಸಲು ಜು.22 ಕ್ಕೆ ಮನವಿ.
ಸಂಜೆವಾಣಿ ವಾರ್ತೆ
ಜಗಳೂರು.ಜು.೨೦:- ಪಿಂಜಾರ ,ನದಾಫ ಅಭಿವೃದ್ದಿ ನಿಗಮಕ್ಕೆ ಅನುದಾನ ಒದಗಿಸಲು ಒತ್ತಾಯಿಸಿ ಜು. 22 ರಂದು ತಾಲೂಕು ಹಾಗೂ ಜಿಲ್ಲಾಮಟ್ಟದಿಂದ ಪಿಂಜಾರ,ನದಾಫ ಸಂಘದವತಿಯಿಂದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಪಿಂಜಾರ ಸಮಾಜದ ತಾಲೂಕು ಅಧ್ಯಕ್ಷ ಬಂಗ್ಲೆ ಫರ್ವೀಜ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 22‌ಲಕ್ಷಕ್ಕೂ ಅಧಿಕ ಸಂಖ್ಯೆ ಹೊಂದಿರುವ ಪಿಂಜಾರ,ನದಾಫ ಜನಾಂಗವು ಸಾಮಾಜಿಕ,ಔದ್ಯೋಗಿಕ, ಶೈಕ್ಷಣಿಕ,ರಾಜಕೀಯ ಕ್ಷೇತ್ರ ಸೇರಿದಂತೆ ಅತ್ಯಂತ ಶೋಷಣೆ ಯಿಂದ ನಲುಗುತ್ತಿದೆ.ಪ್ರವರ್ಗ-1 ಮೀಸಲಾತಿಯಡಿ ಅಲ್ಪಸಂಖ್ಯಾತ ಹಿಂದುಳಿದ ವರ್ಗದ ಯೋಜನೆಯಡಿ ಸೌಲಭ್ಯಗಳನ್ನು ನೀಡಲು ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.ಸೌಲಭ್ಯ ವಂಚಿತಗೊಂಡಿರುವ ಪಿಂಜಾರ ಸಮುದಾಯದಿಂದ ಏಕಕಾಲದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಗಮನಸೆಳೆಯಲಾಗುವುದು ಎಂದರು.ನಂತರ ಬೆಸ್ಕಾಂ ಇಲಾಖೆ ಗುತ್ತಿಗೆದಾರ ಸುಭಾನ್ ಮಾತ ನಾಡಿ ನದಾಪ್ ಪಿಂಜಾರ ಸಮಾಜವು ಅಲ್ಪಸಂಖ್ಯಾತ ಪಂಗಡ ದಲ್ಲಿನ ಪ್ರವರ್ಗ 1 ಮೀಸಲಾತಿ ಹೊಂದಿದ್ದು ಸರ್ಕಾರದ ನಮ್ಮ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗು ಸಾಮಾಜಿಕ ಅಭಿವೃದ್ಧಿ ಹೊಂದಲು ನಿಗಮಕ್ಕೆ ಅನುಧಾನ ನೀಡಬೇಕು ಈ ಮೂಲಕ ಹಿಂದುಳಿದ ವರ್ಗಗಳ ಏಳಿಗೆಗೆ ರಾಜ್ಯ ಸರ್ಕಾರದ ಗಮನ ಸೆಳೆಯಲುಬ ಇದೇ 22 ರಂದು ಸಂಘದ ರಾಜ್ಯಾಧ್ಯಕ್ಷರು ಹೆಚ್.ಜಲ್ ಸಾಬ್ ನೇತೃತ್ವದಲ್ಲಿ ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಗಳು ಹಾಗು ತಹಶಿಲ್ದಾರರ ಮುಖಾಂತರ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಗುವುದು ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸುವಂತೆ ಮನವಿ‌ ಮಾಡಿದರು ಈ ಸಂದರ್ಭದಲ್ಲಿ ತಾಲ್ಲೂಕು ನದಾಪ್ ಪಿಂಜಾರ್ ಸಮಾಜದ ಉಪಾಧ್ಯಕ್ಷರು ಅಕ್ಬರ್ ಆಲಿ ,ಕಾರ್ಯದರ್ಶಿ ಹೆಚ್.ಟಿ.ಶಾರುಕ್.ಸಂಘಟನಾ ಕಾರ್ಯದರ್ಶಿ ದಾನಿ ಸಾಬ್,ಖಜಾಂಚಿ ಇಬ್ರಾಹಿಂ ,ಪದಾಧಿಕಾರಿಗಳಾದ  ಶಕೀರ್ ಅಹಮದ್.ಷೌಕತ್.ನಜೀರ್,ಹೈದರಾಲಿ,ಮುನ್ನಾ. ಸುಬಾನ್.ನಯಾಾಜ್. ಸೇರಿದಂತೆ ಹಲವರು ಇದ್ದರು