ಮಕ್ಕಳು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ:ಡಿ.ಹೆಚ್.ಓ. ಡಾ.ರತಿಕಾಂತ ವಿ.ಸ್ವಾಮಿ
ಕಲಬುರಗಿ:ಜು.20:ಇತ್ತಿಚಿಗೆ ಮಕ್ಕಳಲ್ಲಿ ಕಂಡುಬರುವ ಹೃದಯ ಸಂಬಂಧಿ ಕಾಯಿಲೆಗೆ ಸೂಕ್ತ ಚಿಕಿತ್ಸೆಇರುವುದರಿಂದ ಮಕ್ಕಳ ಆರೋಗ್ಯದ ದೃಷ್ಟಿಕೋನದಿಂದ ಸೂಕ್ತ ಸಮಯದಲ್ಲಿ ಹೃದಯಕ್ಕೆ ಸಂಬಂಧಿ ಕಾಯಿಲೆಗೆ ಆಲಾಸ್ಯ ಮಾಡದೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದು ಆರೋಗ್ಯವಂತರಾಗಬೇಕು ಎಂದು ಡಿ.ಹೆಚ್.ಓ. ಡಾ. ರತಿಕಾಂತ ವ್ಹಿ ಸ್ವಾಮಿ ಅವರು ಸಲಹೆ ನೀಡಿದರು.
ಶನಿವಾರದಂದು ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಂಃಖಏ ) ಜಿಲ್ಲಾ ಮಟ್ಟದ ಕಾರ್ಯಕ್ರಮದಡಿಯಲ್ಲಿ ಹೃದಯ ಸಂಬಂಧಿಸಿದ ಕಾಯಿಲೆ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ ,ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ರಾಷ್ಟ್ರೀಯ ಅಲ ಸ್ವಾಸ್ಥ್ಯ ಕಾರ್ಯಕ್ರಮ ಅರ್ ಸಿ ಹೆಚ್ ವಿಭಾಗ ಕಲಬುರಗಿ. ಹಾಗೂ ವಿಜಯ ಪಾಲಿಕ್ಲಿನಿಕ್ ಮತ್ತು ನಸಿರ್ಂಗ್ ಹೋಮ್ ವಿ.ಕೆ.ಜಿ. ಹಾರ್ಟ್ ಇನ್ಸ್ಟಿಟ್ಯೂಟ್ ರಾಯಚೂರು ಒಡಂಬಡಿಕೆಯಲ್ಲಿ ನಡೆಯಿತು.
ಜಿಲ್ಲಾ ಆರ್ ಸಿ ಹೆಚ್. ಡಾ. ಶರಣಬಸಪ್ಪ ಕ್ಯಾತನಾಳ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಹೃದಯ ಸಂಬಂಧಿ ಕಾಯಿಲೆಗೆ ಉಚಿತ ಚಿಕಿತ್ಸೆ ಶಿಬಿರ ಕಾರ್ಯಕ್ರಮ ನಮ್ಮ ಆರೋಗ್ಯ ಇಲಾಖೆ , ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಕಲಬುರಗಿ. ಜಂಟಿ ಅಗಿ ಸೇವೆಯನ್ನು ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂತಹದು. ಎಂದರು.
ಸಮಾನ್ಯ ಜನರಲ್ಲಿ ಹೆಚ್ಚು ಹೆಚ್ಚು ಹಣ ಖರ್ಚು ಮಾಡಲಾಗದೆ ದೊಡ್ಡ ದೊಡ್ಡ ರೋಗಗಳಿಗೆ ಸರಿಯಾಗಿ ಚಿಕಿತ್ಸೆ ಪಡೆಯದೆ ವಂಚಿತರಾಗುತ್ತಾರೆ ಅದರಂತೆ ಈಗಿನ ಮಕ್ಕಳಿಗೆ ಕೂಡ ಹೃದಯ ಶಸ್ತ್ರಚಿಕಿತ್ಸೆ ಚಿಕಿತ್ಸೆ ಪಡೆಯಲು ಅಗುವುದಿಲ್ಲ ಹಾಗದ ಕಾರಣ ನಮ್ಮಲ್ಲಿ ಇರುವಂತ ಸೌಲಭ್ಯಗಳನ್ನು ವಿವಿಧ ಈ ಇಲಾಖೆಗಳೊಂದಿಗೆ ಕೈಜೋಡಿಸಿ ಉತ್ತಮವಾದ ಸೇವೆ ಒದಗಿಸಲು ಸಹಕಾರಿ ಅಗಲಿದೆ.ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಅಂಗನವಾಡಿ, ಶಾಲಾ, ಕಾಲೇಜು ಮಕ್ಕಳು, ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶವಾಗಿದೆ. 283 ಕೇಸ್ ಇದ್ದೀವೆ ಹುಟ್ಟಿದ 0 -18 ವರ್ಷದೊಳಗಿನ ಅಂಗನವಾಡಿ ಕೇಂದ್ರ ಹಾಗೂ ಶಾಲೆಯ ಮಕ್ಕಳಿಗೆ ಹೃದಯ ಸಂಬಂಧಿ ಚಿಕಿತ್ಸೆ ಖಾಸಗಿ ಅಗಿ ಮಾಡಿಸಿದ್ದರೆ 2/3 ಲಕ್ಷ ರೂಪಾಯಿ ಖರ್ಚು ಅಗುತ್ತದೆ. ಅದರೆ ಇಂದು ನಿಮ್ಮ ಮನೆ ಬಾಗಿಲಿಗೆ ಬಂದು ಉಚಿತ ಶಸ್ತ್ರಚಿಕಿತ್ಸೆ ನೀಡುವಲ್ಲಿ ನಮ್ಮೆಲ್ಲ ಇಲಾಖೆ ಒಂದು ಹೆಜ್ಜೆ ಮುಂದು ಇದೆ. ತಜ್ಞ ವೈದ್ಯರು ಕರೆಸಿ ಧೃಡಪಟ್ಟ ಹೃದಯ ಸಂಬಂಧಿ ಪಾಲನುಭವಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದು ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಇದರ ಪಾತ್ರ ನಮ್ಮೆಲ್ಲರ ಅರ್ ಬಿ ಎಸ್ ಕೆ ಸಿಬ್ಬಂದಿ ವೈದ್ಯರು . ಅಶಾ ಕಾರ್ಯಕರ್ತೆ ಮೇಲ್ವಿಚಾರಕಿರು , ಅಂಗನವಾಡಿ ಮೇಲ್ವಿಚಾರಕಿರು . ಇನ್ನಿತರೆ ಅಧಿಕಾರಿಗಳು ವಿಶೇಷವಾಗಿ ನಮ್ಮ ಡಿಸಿ ಮೇಡಂ, ಸಿಇಓ ಸರ್, ಹೆಚ್ಚಾಗಿ ಒತ್ತುಕೊಟ್ಟು ಕಾರ್ಯಕ್ರಮ ಸಲಹೆ ಸೂಚನೆಗಳನ್ನು ನಿಡುತ್ತಿರುವುದರಿಂದ ನಮ್ಮ ಕಲಬುರಗಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದವೆ.ಎಂದರೆ ಹೆಮ್ಮೆಯಿಂದ ಹೇಳಿಕೊಳ್ಳುಬಹದು. ಇತರೆ ಜಿಲ್ಲೆಯಗೆ ನಮ್ಮ ಕಲಬುರಗಿ ಜಿಲ್ಲೆ ಮಾದರಿಯಾಗಿ ಗುರುತಿಸಿಕೊಂಡಿದೆ. ಎಂದು ಹೆಮ್ಮ ಪಟ್ಟರು.
ವಿಜಯ ಒಅ ಕ್ಲಿನಿಕ್ ವಿ.ಜಿ.ಕೆ. ಹಾರ್ಟ್ ಸಂಸ್ಥೆ ಮತ್ತು ಎಂಡಿ . ಡಿಎಂ. ಚೀಫ್ ಕಾರ್ಡಿಯಲೋಜಿ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಅನಿಲ್ ಕುಲಕರ್ಣಿ ಈ ಶಿಬಿರದ ಲಾಭದ ಬಗ್ಗೆ ವಿವರಿಸಿ ಮಾತನಾಡಿದರು.
ವೇದಿಕೆ ಮೇಲೆ ಜಿಲ್ಲಾ ಪ್ರಾಂಶುಪಾಲರು ಜಿಮ್ಸ್ ವೈದ್ಯಕೀಯ ಕಾಲೇಜಿನ ಡಾ. ಅಜಯಕುಮಾರ ಜಿ. ಶಸ್ತ್ರಜ್ಞರು ಮತ್ತು ಅಧಿಕ್ಷಕರು ಡಾ. ಓಂ ಪ್ರಕಾಶ ಅಂಬೂರೆ . ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಇಲಾಖೆಯ ನವೀನಕುಮಾರ್ . ಸಿಡಿಪಿ ಅಧಿಕಾರಿಗಳಾದ ಭೀಮರಾವ್ , ಶ್ರೀ ಕಾಂತ್. ಪ್ರೇಮ ಕಲಬುರಗಿ. ಆರ್ ಬಿ ಎಸ್ ಕೆ ಜಿಲ್ಲಾ ಸಂಯೋಜಕ ಶಿವಕುಮಾರ್ ಕಾಂಬಳೆ. ಡಿಇಐಸಿ ಕೃಷ್ಣ ವಗ್ಗೆ. ಜಿಲ್ಲಾ ಆರ್ ಬಿ ಎಸ್ ಕೆ ಡಿಇ ಓ ರಾಜೇಶ್ವರಿ ಗುಡ್ಡ. ಜಿಲ್ಲಾ ಸಂಯೋಜಕರು ಡಾ. ಪ್ರವೀಣ್ ಜೋಶಿ, ಆರ್ ಬಿ ಎಸ್ ಕೆ ವೈದ್ಯರುಗಳಾದ, ಡಾ. ವಿನಾಯಕ್ ತಾಟಿ, ಡಾ. ಅಭಿμÉೀಕ್, ಡಾ. ಕಾವೇರಿ, ಡಾ. ಬಾಶ್ಗೀರ್, ಡಾ. ವಿ ಆರ್ ಗೋಗಿ, ಡಾ. ನಾಗರತ್ನ, ಡಾ ಶಿಲ್ಪ, ಡಾ. ರಾಕೇಶ್, ಡಾ. ಗುರುರಾಜ್, ಡಾ. ಮಾಂತೇಶ್, ಹಾಗೂ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿಯರು. ಅಂಗನವಾಡಿ ಮೇಲ್ವಿಚಾರಕಿಯರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು. ಮತ್ತು ಫಲಾನುಭವಿ ಮಕ್ಕಳು ಮತ್ತು ಪಾಲಕರು ಈ ಶಿಬಿರದಲ್ಲಿ ಸದುಪಯೋಗ ಪಡೆದುಕೊಂಡರು.