ಪ್ರಾಮಾಣಿಕತೆ ಪರೀಕ್ಷೆಗೆ ಸಿದ್ದರಾಗಿ…. ಧರ್ಮಸ್ಥಳದ ಮಂಜುನಾಥನ ಸನ್ನಿದಿಯಲ್ಲಿ‌ ಗಂಟೆಯೊಡೆಯಲು ಕರೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೦; ಲಗಾನ್ ಟೀಂ ಎಂಬ ಹೆಸರಿಟ್ಟುಕೊಂಡಿರುವ ಮಾಜಿ‌ಸಚಿವ ಎಂ.ಪಿ ರೇಣುಕಾಚಾರ್ಯ ಅವರು‌ ಲೋಕಸಭಾ ಚುನಾವಣಾ ವೇಳೆ‌  ಬಿಜೆಪಿ ಸೋಲಲು‌ ನೇರ ಕಾರಣ.ಕುತಂತ್ರದಿಂದ ಬಿಜೆಪಿ ಅಭ್ಯರ್ಥಿ ಸೋಲಿಸಿದರು ಎಂದು ಬಿಜೆಪಿ ಮಾಜಿ‌ ಅಧ್ಯಕ್ಷ ವಿರೇಶ್ ಹನಗವಾಡಿ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ದಾವಣಗೆರೆಯಲ್ಲಿ ಮಾಜಿ ಸಂಸದರಾದ ಜಿ.ಎಂ‌.ಸಿದ್ದೇಶ್ವರ್ ಜನ್ಮದಿನ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಬಿಜೆಪಿರಾಜ್ಯನಾಯಕರು ಬಂದಿದ್ದರು.ಹುಟ್ಟು ಹಬ್ಬದ ಜೊತೆಗೆ ಲೋಕಸಭಾ ಚುನಾವಣೆಯ ಸೋಲಿನಪ‌ರಾಮರ್ಶೆ ಆಗಿತ್ತು.ಈ ವೇಳೆ ಮುಖಂಡರಾದ ಸಿಟಿ ರವಿ,‌ಗೊವಿಂದ ಕಾರಜೋಳ,ಮುರುಗೇಶ್ ನಿರಾಣಿ ಸೇರಿದಂತೆ ‌ಅನೇಕರು ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ಬಂದಿದ್ದರು.ಈಕಾರ್ಯಕ್ರಮ ಆಯೋಜನೆ ಮಾಡಿದ್ದೆ ಕಾರ್ಯಕರ್ತರಿಗೆ ಹುರಿ ದುಂಬಿಸುವುದಾಗಿತ್ತು.ಕಾರ್ಯಕರ್ತರು ಸೋಲಿನಿಂದ‌ ಧೃತಿ ಗೆಡಬಾರದು ಎಂಬುದಾಗಿತ್ತು.ಆದರೆ‌ ಈ‌ ಕಾರ್ಯಕ್ರಮದವಿಚಾರವಾಗಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನಮಗೆ ಎಚ್ಚರಿಗೆ ಎಂದಿದ್ದಾರೆ ಇದು ಖಂಡನೀಯ ಎಂದರು. ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೋಲುಮಾಡಿಲ್ಲ.ಕಿತ್ತೂರು ಆಸ್ಥಾನದಲ್ಲಿ ಚೆನ್ನಮ್ಮ ಹಾಗೂ  ರಾಯಣ್ಣ ಬಂಧಿಸಲು ಹೇಗೆ ನಮ್ಮವರೇ ಕಂಪನಿ ಸರ್ಕಾರಕ್ಕೆ ಹೇಗೆ ಸಹಕಾರ ಮಾಡಿದರೋ ಆ ರೀತಿ ನಮ್ಮ ಅಭ್ಯರ್ಥಿಗೆ ಲಾಗನ್ ಟೀಂ ಎಂದುಕೊಂಡವರು ಸಹಾಯ ಮಾಡಿದರು.ಕಾರ್ಯಕರ್ತರ ಬೆನ್ನಿಗೆ ಚೂರಿ ಹಾಕಿದರು ಎಂದರು ಇವರು ಮಾಡಿದ ಕುತಂತ್ರ ಮುಚ್ಚಿಡಲು ಸಾಧ್ಯವಿಲ್ಲ.ಲಗಾನ್ ಟೀಂ ಎಂದು ಇವರೇ ಹೆಸರು ಇಟ್ಟುಕೊಂಡಿದ್ದು ನಾವಲ್ಲ.ಸೋಲಿನಿಂದ ಧೃತಿಗೆಟ್ಟಿದ್ದಕ್ಕಾಗಿನಾವೆಲ್ಲಾ ಕಾರ್ಯಕರ್ತರಿಗೆ ಸಮಾಧಾನ ಮಾಡಿದ್ದೇವೆ.  ರೇಣುಕಾಚಾರ್ಯ ಅವರಂತೆ ಯಾರು ಪ್ರಚಾರ ಪ್ರಿಯರಲ್ಲ ಈತ ಒಂದು ರೀತಿ ಟಿವಿ ಹುಚ್ಚರು ಎಂದರು ತಪ್ಪಾಗುವುದಿಲ್ಲ.ಮೊಣಕಾಲುದ್ದ ನೀರಿನಲ್ಲಿಳಿದು ಪ್ರಚಾರ ಗಿಟ್ಟಿಸಿಕೊಂಡವರು‌ ಅವರು.ಬಿಎಸ್ ವೈ ಸಿಎಂ ಆಗಿದ್ದಾಗ ಬಿಎಸ್ ವೈಗೆ ಟಾರ್ಚರ್ ಕೊಟ್ಟವರು ಈತ ಎಂಬುದನ್ನು ಕಾರ್ಯಕರ್ತರು ಮರೆತಿಲ್ಲ.ಈತ ಅವಕಾಶವಾದಿ ರಾಜಕಾರಣಿ.ಯಾವ ನಾಯಕರನ್ನೂ ಬಿಟ್ಟಿಲ್ಲ ಜಗದೀಶ್ ಶೆಟ್ಟರ್, ಈಶ್ವರಪ್ಪ , ಸಂತೋಷ್ ಜಿ, ಸೋಮಣ್ಣ ಶೋಭ ಯತ್ನಾಳ್, ಸಿಟಿ ರವಿ ವಿರುದ್ದವೂ ಮಾತನಾಡಿದ್ದಾರೆ.ಏನಾದರೂ ಮತಾನಾಡಿ ಸುದ್ದಿಯಲ್ಲಿರುವ ದುರ್ಬುದ್ದಿ ಇವರದ್ದು‌ ಎಂದು ಹರಿಹಾಯ್ದರು.ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಕಾಂಗ್ರೆಸ್ ಬಾಗಿಲು ತಟ್ಟಿದ್ದರು ಎಂಬುದನ್ನು ಯಾರು ಮರೆತಿಲ್ಲ.ಎಸ್ ಎಸ್ ಎಂ ಡಿಕೆ ಶಿವಕುಮಾರ್, ಡಿ.ಕೆ.ಸುರೇಶ್, ಬೊಸ್ ರಾಜ್ ಭೇಟಿ ಮಾಡಿ ಕಾಂಗ್ರೆಸ್ ‌ಸೇರಲು ಬಯಸಿದ್ದರು.ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಹೊನ್ನಾಳಿಯಲ್ಲಿ ಕಾರ್ಯಕರ್ತರು ತುಂಬಾ ಗಟ್ಟಿಗರು ಅಂತವರ ಹಾದಿ ತಪ್ಪಿಸಿದ್ದಾರೆ.ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ.ಎಂಎಲ್ ಎ ಆಗುವ ಮೊದಲು ಎಲ್ಲಿದ್ದರು ಏನಾಗಿದ್ದರು ಮರೆಯಬಾರದು. ಈಗ ಸ್ವಾರ್ಥ ರಾಜಕಾರಣಕ್ಕೆ ಅವಕಾಶವಾದಿಯಾಗುವುದನ್ನು ಮೊದಲು ಬಿಡಲಿ. ಯಾರ ವ್ಯಕ್ತಿತ್ವ ಏನು ಮನಸ್ಥಿತಿ ಏನು ಎಂಬುದು ಕಾರಗುಕರ್ತರಿಗೆ ಅರಿವಾಗಿದೆ.ರಾಜ್ಯದಲ್ಲಿ ಬಿಎಸ್ ವೈ ಉತ್ತಮ ಕೆಲಸ ಮಾಡಿದ್ದರು. ಬೊಮ್ಮಾಯಿ ಕೂಡ ಮಾಡಿದ್ದರು. ಉತ್ತಮ ಆಡಳಿತ ನಡೆಸುತ್ತಿದ್ದ ವೇಳೆ ಬೇಡ ಜಂಗಮ ಪ್ರಮಾಣಪತ್ರ ಪಡೆದು ಸುದ್ದಿಯಾದರು.ಬಿಜೆಪಿ ಪಕ್ಷ ಕಟ್ಟಿದ್ದೇನೆ ಎನ್ನುವುದೇ ಆದರೆ ಒಳ ಆಟ ಮಾಡುವ ಬುದ್ದಿ ಬಿಡಲಿ.ನಾವೇನು ಕೈಕಟ್ಟಿ ಕುಳಿತಿಲ್ಲ ವರಿಷ್ಠರಿಗೆ ಎಲ್ಲಾ ವಿಚಾರ ಹೇಳಿದ್ದೇವೆ.ಪ್ರಮಾಣಿಕರಾಗಿದ್ದರೆ ನೀವು ಸಂಚಾಲಕರಾಗಿ ಕೆಲಸ ಮಾಡಿಸಿದ್ದೀರಾ ಯೋಚಿಸಿ.ಭೂತನ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ…
ಯಾರಿಗೆ ಏನು ಹೇಳಿದ್ದೀರಾ ಯಾವ ತೊಟದ ಮನೆಯಲ್ಲಿ ಸಭೆ ಸೇರಿದ್ದೀರಿ ಇದನ್ನು ಸಮಯ ಬಂದಾಗ ಕಾರ್ಯಕರ್ತರೇ ಹೇಳುತ್ತಾರೆ.ಯಾವಚೀಪ್ ಪಬ್ಲಿಸಿಟಿಯಿಂದ ಏನೂ ಆಗಲ್ಲ.ನಮಗೆ ಯಾರ ಅಂಜಿಕೆಯೂ ಇಲ್ಲ ಡಬಲ್ ಗೇಮ್ ಆಡಿದವರಿಗೆ ಅಂಜಿಕೆ ಇರಬೇಕು ನಮಗಲ್ಲ.ನಿಮ್ಮಿಂದ ಎಚ್ಚರಿಕೆ ಕೇಳಿಸಿಕೊಳ್ಳುವ ವ್ಯಕ್ತಿ ನಾನಲ್ಲ..ನಾನೇನು ಎಂಬುದು ಪಕ್ಷ ಹಾಗೂ ಕಾರ್ಯಕರ್ತರಿಗೆ ಗೊತ್ತಿದೆ ಎಂದರು.
ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ ಲಗಾನ್ ಟೀಮ್ ಹೆಸರಿಟ್ಟುಕೊಂಡು ಬ್ಲಾಕ್ ಮೇಲ್ ರಾಜಕಾರಣ ಮಾಡುವುದು ಸರಿಯಲ್ಲ.ಚುನಾವಣೆ ಎಂದರೆ ಸೋಲು ಗೆಲುವು ಸಹಜ.ಸೋಲಿನ ಬಗ್ಗೆ ಮಾತನಾಡುವವರು ಚುನಾವಣೆ ಘೋಷಣೆಯಿಂದ ಅಭ್ಯರ್ಥಿ ಘೋಷಣೆಯವರೆಗೂ ನಡೆದು ಕೊಂಡ ರೀತಿಎಷ್ಟು ಬಾರಿ ಕಾಂಗ್ರೆಸ್ ಮನೆಗೆ ಹೋಗಿಬಂದ್ರಿ.ಎಲ್ಲವೂ ಗೊತ್ತಿದೆ.ಎಸ್ ಎಸ್ ಎಂ ಮನೆಗೆ ಹೊದಾಗ ಕಾಂಗ್ರೆಸ್ ಗೆ ಸೇರಲು ಬಂದಿಲ್ಲ ಎಂದು ಅವತ್ತು ಯಾಕೆ ಹೇಳಿದ್ದು .ಬ್ಲಾಕ್ ಮೇಲ್ ತಂತ್ರ ನಮ್ಮ ಮೇಲೆ ಬೇಡ.ಬ್ಲಾಕ್ ಮೇಲ್ ಮಾಡಿ ಅಧಿಕಾರ ಪಡೆದಿರುವ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಎಲ್ಲವನ್ನೂ ಜನ ನೋಡಿದ್ದಾರೆ.ಎಸ್ ಎಆರ್ ಪಕ್ಷ ಕಟ್ಟಿದ್ದರು ಎನ್ನುವರು ಅವರಿಗೆ ಯಾಕೆ ಮಂತ್ರಿ ಮಾಡಲಿಲ್ಲ.ಬ್ಲಾಕ್ ಮೇಲ್ ರಾಜಕಾರಣ ಮಾಡುವವರಿಗೆ ಎಸ್ ಎ ಆರ್ ಕಾಣಲಿಲ್ಲವೇ.ಅಧಿಕಾರದ ಆಸೆ…ತಮಗೆ..
ನಿಮ್ಮಬ್ಲಾಕ್ ಮೇಲೆ ರಾಜಕಾರಣ ಬಹಳದಿನ ನಡೆಯಲ್ಲಸುದ್ದಿಗೋಷ್ಠಿಯಲ್ಲಿ, ಎಸ್.ವಿ. ರಾಮಚಂದ್ರ,  ಬಿ.ಎಸ್. ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ಜಯಪ್ರಕಾಶ್ ಕೊಂಡಜ್ಜಿ, ಹೊನ್ನಾಳಿ ಹನುಮಂತಪ್ಪ, ಕೆ.ವಿ. ಚನ್ನಪ್ಪ, ದೇವರಾಜ್, ರವಿಕುಮಾರ್, ಅಜಯ್ ರೆಡ್ಡಿ, ರಾಜು ನೀಲಗುಂದ, ಚನ್ನೇಶ್ ಇನ್ನಿತರರು ಉಪಸ್ಥಿತರಿದ್ದರು.