ಜಿಎಂಐಟಿಯಲ್ಲಿ‌ ಎಂಬಿಎ ಕ್ರ್ಯಾಶ್ ಕೋರ್ಸ್ ತರಬೇತಿ

ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೦: ನಗರದ  ಜಿ.ಎಂ. ವಿಶ್ವವಿದ್ಯಾಲಯದ ಎಂಬಿಎ ವಿಭಾಗದಿಂದ ಮೂರು ದಿನದ ಎಂಬಿಎ ಕ್ರ್ಯಾಶ್ ಕೋರ್ಸ್ ತರಬೇತಿ ಕಾರ್ಯಕ್ರಮವನ್ನು ಎಂಬಿಎ ಕೋರ್ಸ್ ಸೇರ ಬಯಸುವ ಆಕಾಂಕ್ಷಿಗಳಿಗಾಗಿ ಜುಲೈ 23 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಕೂಲ್ ಆಫ್ ಮ್ಯಾನೇಜೆಂಟ್ ಡೀನ್ ಡಾ. ಬಸವರಾಜ ಸ್ವಾಮಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿವಿಧ ಜಿಲ್ಲೆಗಳಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಜುಲೈ 21 ಭಾನುವಾರ ಸಂಜೆ 5 ನೊಂದಣಿಮಾಡಿಕೊಳ್ಳಬಹುದು ಎಂದು ತಿಳಿಸಿದರು.ಹೆಸರು ನೋಂದಣಿಗಾಗಿ ಲಿಂಕ್ https://forms.gle/qjByTJQtrb2bFQar9 ಉಪಯೋಗಿಸಬಹುದು. ಮೂರು ದಿನದ ಈ ತರಬೇತಿ ಕಾರ್ಯಕ್ರಮಕ್ಕೆ ಶೈಕ್ಷಣಿಕ ತಜ್ಞರುಗಳು ಆಗಮಿಸಿ ವಿದ್ಯಾರ್ಥಿಗಳನ್ನು ಪಿಜಿಸಿಇಟಿ ಪ್ರವೇಶ ಪರೀಕ್ಷೆಗೆ ಬೇಕಾದ ನೈಪುಣ್ಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದು ತಿಳಿಸಿದರು.ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಿ.ಎಂ. ವಿಶ್ವವಿದ್ಯಾಲಯ ಎರಡರಲ್ಲೂ ಎಂಬಿಎ ವಿಭಾಗವಿದ್ದು, ಹೆಚ್ಚಿನ ಮಾಹಿತಿಗೆ ಡಾ. ಪಿ.ಎಸ್.  ಬಸವರಾಜು  9448715326, ಡಾ. ಶ್ರೀಶೈಲ ವಿಜಯಪುರ- 8553654836, ಐ. ವಿನಯ್-8971271712 ಇವರಿಗೆ ಕರೆ ಮಾಡಲು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ಡಾ. ಶ್ರೀಶೈಲ ವಿಜಯಪುರ, ತೇಜಸ್ವಿ ಕಟ್ಟೀಮನಿ ಉಪಸ್ಥಿತರಿದ್ದರು.