ಪೌರಾಡಳಿತ ಹಾಗೂ ಹಜ್ ಸಚಿವರ ಪ್ರವಾಸ
ಕಲಬುರಗಿ:ಜು.20:ರಾಜ್ಯದ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ಬೆಂಗಳೂರಿನಿಂದ ವಿಮಾನದ ಮೂಲಕ ಜುಲೈ 21 ರಂದು ಭಾನುವಾರ ಬೆಳಿಗ್ಗೆ 9.20 ಗಂಟೆಗೆ ಕಲಬುರಗಿಗೆ ಆಗಮಿಸುವರು.
ನಂತರ ಸಚಿವರು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲೆಯ ಸಾರ್ವಜನಿಕರನ್ನು ಭೇಟಿ ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 4 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹಮನಾಬಾದ್ ಮಾರ್ಗವಾಗಿ ಹೈದ್ರಾಬಾದ್‍ಗೆ ಪ್ರಯಾಣಿಸುವರು.