ಜಾನಪದ ಕಲಾವಿದರಿಗೆ ವೇದಿಕೆ ಕಲ್ಪಿಸಿ
ಕಲಬುರಗಿ,ಜು.20-ಜಾನಪದ ಕಲಾವಿದರನ್ನು ಪೆÇ್ರೀತ್ಸಾಹಿಸಲು ಸಂಘ ಸಂಸ್ಥೆಗಳು ಜಾನಪದ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸಬೇಕು. ಅಂದಾಗ ಮಾತ್ರ ಜಾನಪದ ಕಲೆ ಉಳಿಸಿ ಬೆಳೆಸಬಹುದು ಎಂದು ದೇವನ ತೆಗನೂರಿನ ಕಾಂಗ್ರೆಸ್ ಹಿರಿಯ ಮುಖಂಡರಾದ ಶಿವಪುತ್ರ ನಾಟಿಕರ ಅವರು ಹಾರ್ಮೋನಿಯಂ ನುಡಿಸುತ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಹಾಬಾದ ತಾಲ್ಲೂಕಿನ ದೇವನ ತೆಗನೂರಿನ ಶ್ರೀಕರಿಘೂಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಸಂಗಿತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಚ ತೋಟದ ಮಾತನಾಡುತ್ತ, ನಮ್ಮ ಭಾಗದ ಯುವ ಕಲಾವಿದರು ಹೆಚ್ಚಿನ ಆಸಕ್ತಿ ವಹಿಸಿ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತ ಬಂದರೆ ಜಾನಪದ ಕಲೆ ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಧರ ಮುಲಿಮನಿ, ಜೈಭಿಮ ರೊಜಾ, ಭಿಮಣ್ಣ ಹವಳಿ, ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ಮಾಡುಬುಳ ಆಗಮಿಸಿದರು.
ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಾನಪದ ಗಾಯನದಲ್ಲಿ ನಿಲಮ್ಮ, ತತ್ವಪದ, ಶಿವುಬಾಯಿ ಸೋಬಾನೆ ಪದ, ಬಸ್ಸಮ್ಮ ಜೋಗುಳ ಪದ ಹಾಡಿದರು. ದಸರತ ಪಾಟೀಲ ಹಾರ್ಮೋನಿಯಂ, ವಿಠಲ ಕಾರಬಾರಿ ತಬಲಾ ಸಾಥ್ ನೀಡಿದರು. ಗುರುನಾಥ ಚಂಡ್ರಕಿ, ವಿಜಯಕುಮಾರ್ ಜಾಧವ್ ಕಾರ್ಯಕ್ರಮ ನಿರುಪಿಸಿ ವಂದಿಸಿದರು.