ಕನ್ನೊಳ್ಳಿ ದೊಡ್ಡಪ್ಪ ಮಹಾರಾಜರ ನೂತನ ಶಿಲಾಮಂಟಪದ ಕಳಸಾರೋಹಣ
ಕಲಬುರಗಿ,ಜು.20-ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಕನ್ನೊಳ್ಳಿ ಗ್ರಾಮದ ದೊಡ್ಡಪ್ಪ ಮಹಾರಾಜರ ನೂತನ ಶಿಲಾಮಂಟಪದ ಕಳಸಾರೋಹಣ ಬಹಳ ಅದ್ದೂರಿಯಾಗಿ ಜರುಗಿತು.
ಬಂಥನಾಳದ ಡಾ.ವೃಷಭಲಿಂಗ ಮಹಾ ಶಿವಯೋಗಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳ ಹಾಗೂ ಶಹಬಾದದ ಅಲ್ಲಮಪ್ರಭು ಶ್ರೀಗಳು ಸಮ್ಮುಖದಲ್ಲಿ, ಬಸವೇಶ್ವರ ದೇವಸ್ಥಾನದಿಂದ ಆರಂಭದ ನೂತನ ಕಳಸ ಮೆರವಣಿಗೆ ತಾಯಂದಿರ ಕುಂಬೋತ್ಸವ, ಡೊಳ್ಳು, ಬಾಜೆ , ಭಜಂತ್ರಿ ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀಮಠ ಸೇರಿ ಕಳಸಾರೋಹಣ ನೆರವೇರಿಸಲಾಯಿತು. ಕನ್ನೊಳ್ಳಿ ಗ್ರಾಮದ ಸಮಸ್ತ ಸದ್ಭಕ್ತರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.