ಸಚಿವ ತಿಮ್ಮಾಪುರಗೆ ಬೀದರ್ ನಲ್ಲಿ ಅದ್ದೂರಿ ಸ್ವಾಗತ
ಬೀದರ್:ಜು.20: ಇಂದು ರಾಜ್ಯದ ಮುಕುಟಪ್ರಾಯ ಗಡಿ ಜಿಲ್ಲೆ ಬೀದರ್ ಗೆ ರಾಜ್ಯದ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರವರು ಆಗಮಿಸಿದ್ದು ಅವರಿಗೆ ಬೀದರ್ ರೈಲು ನಿಲ್ದಾಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಮಾದೀಗರ ಸಮನ್ವಯ ಸಮಿತಿ ವತಿಯಿಂದ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಾದ ನಿಂಗನಗೌಡ, ಆನಂದ ಉಕ್ಕಲಿ, ಸುರೇಶ ಕಮಲಾಪುರೆ, ಎಸ್.ಎಸ್.ತ್ರಿವೇದಿ, ಅನಿಲ ರಾಜ, ಮಾದೀಗರ ಸಮನ್ವಯ ಸಮಿತಿ ಮುಖಂಡರಾದ ರಾಜು ಕಡ್ಯಾಳ, ಚಂದ್ರಕಾಂತ ಹಿಪ್ಪಳಗಾಂವ, ಫನಾರ್ಂಡಿಸ್ ಹಿಪ್ಪಳಗಾಂವ, ಕಮಲಾಕರ ಹೆಗಡೆ, ಜಾಫೆಟ್ ಕಡ್ಯಾಳ, ದಯಾ ಕಡ್ಯಾಳ, ಸಿ.ಎಮ್ ದಾಸ್, ವಿಜಯಕುಮಾರ ಹಿಪ್ಪಳಗಾಂವ, ಶಿವಣ್ಣ, ಪ್ರಕಾಶ ಕೋಟೆ ಹಾಗೂ ಇತರರು ಹಾಜರಿದ್ದರು.