4 ವರ್ಷ ಒಳಗಿನ ಮಕ್ಕಳಿಗೆ ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸುವ ಬಗ್ಗೆ ಪ್ರಾತಕ್ಷಿಕೆ
ಹುಮನಾಬಾದ್: ಜು.20:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾಗು ಬಸ ನಿಲ್ದಾಣದಲ್ಲಿ 04 ವರ್ಷ ಒಳಗಿನ ಮಕ್ಕಳಿಗೆ ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸುವ ಬಗ್ಗೆ ಪ್ರಾತಕ್ಷಿಕೆ ಕಾರ್ಯಕ್ರಮ ಜರುಗಿತು.
ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಭಾಲ್ಕಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರು ಮಹಮ್ಮದ್ ಜಾಫರ್ ಸಾದಿಕ್ ಹಾಗು ಮೋಟಾರು ವಾಹನ ನಿರೀಕ್ಷಕರು ವಿಜಯಕುಮಾರ, ಸಂಚಾರಿ ಪೆÇಲೀಸ್ ಠಾಣೆಯ ಪಿಎಸ್‍ಐ ಬಸವಲಿಂಗ ರವರು ದ್ವಿಚಕ್ರ ವಾಹನದ ಮೇಲೆ 04 ವರ್ಷ ಒಳಗಿನ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ನಿಯಮಗಳ ಬಗ್ಗೆ ಹಾಗು ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸುವ ಕುರಿತು ಸಾರ್ವಜನಿಕರಿಗೆ ವಿವರಿಸಿದರು.
ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಭಾಲ್ಕಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರು ಮಹಮ್ಮದ್ ಜಾಫರ್ ಸಾದಿಕ್ ಮಾತನಾಡಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಫೆಬ್ರವರಿ 15, 2022 ರ ಅಧಿಸೂಚನೆಯ ಪ್ರಕಾರ ಸಿಎಮ್‍ವಿಆರ್ 1989 ರ ನಿಯಮ 138ರ ತಿದ್ದುಪಡಿಯಂತೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಸವಾರಿ ಅಥವಾ ಮೋಟಾರ್ ಸೈಕಲ್‍ನಲ್ಲಿ ಸಾಗಿಸುವ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ನಿಯಮಗಳನ್ನು ಸೂಚಿಸಿದೆ. ಎಂದರು.
2020 ನೇ ಸಾಲಿನಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ 14 ವರ್ಷ ಒಳಗಿನ ಒಟ್ಟು 2,700 ಮಕ್ಕಳು ಹಾಗು 16 ವರ್ಷ ಒಳಗಿನ ಒಟ್ಟು 14,000 ಮಕ್ಕಳು ಮೃತಪಟ್ಟಿರುತ್ತಾರೆ. ಆದ್ದರಿಂದ 04 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದ್ವೀಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗುವಾಗ ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸತಕ್ಕದ್ದು. ಸೆಫ್ಟಿ ಹಾರ್ನೆಸ್ ಬೆಲ್ಟ್ ಧರಿಸುವ ಬಗ್ಗೆ ಮಕ್ಕಳಿಗೆ ಬೆಲ್ಟ್ ತೊಡಿಸುವ ವಿಧಾನದ ಬಗ್ಗೆ ಪ್ರಾತಕ್ಷಿಗೆ ತೋರಿಸಿದರು. 05 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗುವಾಗ ಹೆಲ್ಲೆಟ ಕಡ್ಡಾಯವಾಗಿ ಧರಿಸತಕ್ಕದ್ದು. 04 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವೀಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗುವಾಗ ಸೆಪ್ಪಿ ಹಾರ್ನೆಸ್ ಬೆಲ್ಟ್ ಧರಿಸಿ ಗಂಟೆಗೆ 40 ಕಿ.ಮಿ. ವೇಗ ಮೀರತಕ್ಕದಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ರೂ.1000 ದಂಡ ವಿಧಿಸಲಾಗುವುದು. ಎಂದು ಎಚ್ಚರಿಸಿದರು.