ರೋಟರಿಯಿಂದ ಶುದ್ಧ ನೀರಿನ ಘಟಕ ಅಳವಡಿಕೆ
ಬೀದರ:ಜು.20: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿಗಾಗಿ ಇಲ್ಲಿಯ ನಯಾ ಕಮಾನ್‍ನ ಕೃಷ್ಣಮೂರ್ತಿ ಆಸ್ಪತ್ರೆ ಹೊರ ಭಾಗದಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿದೆ.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಸಾಧುಗೋಪಾಲಕೃಷ ಈಚೆಗೆ ಘಟಕಕ್ಕೆ ಚಾಲನೆ ನೀಡಿದರು.
ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಹಂಗರಗಿ, ಮಾಜಿ ಸದಸ್ಯ ಧನರಾಜ ಹಂಗರಗಿ, ಸಾಧು ಸರಸ್ವತಿ, ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಖಜಾಂಚಿ ಡಾ. ಶರಣ ಬುಳ್ಳಾ ಮತ್ತಿತರರು ಇದ್ದರು.
ಪದಗ್ರಹಣ:
ನಗರದ ಇನ್‍ಸ್ಪೈರ್ ಹೋಟೆಲನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಈಚೆಗೆ ನಡೆಯಿತು.
ನಿರ್ಗಮಿತ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಅವರು ನೂತನ ಅಧ್ಯಕ್ಷ ಶಿವಕುಮಾರ ಪಾಖಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಖಜಾಂಚಿ ಡಾ. ಶರಣ ಬುಳ್ಳಾ ಸೇರಿದಂತೆ 37 ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಸಾಧುಗೋಪಾಲಕೃಷ್ಣ, ನಿಕಟಪೂರ್ವ ಗವರ್ನರ್ ಚಿನ್ನಪ್ಪ ರೆಡ್ಡಿ, ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ರೊಟೆರಿಯನ್‍ಗಳಾದ ಬಸವರಾಜ ಧನ್ನೂರ, ಹಾವಶೆಟ್ಟಿ ಪಾಟೀಲ, ರವಿ ಮೂಲಗೆ ಮತ್ತಿತರರು ಇದ್ದರು.