ವಿಶೇಷ ಸುಗಮ ಸಂಗೀತ ಕಾರ್ಯಕ್ರಮ
ಕಲಬುರಗಿ:ಜು.20: ನಗರದ ಹಂಸಧ್ವನಿ ಕಲಾನಿಕೇತನ(ರಿ.) “ಸಾಥಿ” ಎನ್ನುವ ಶಿರ್ಷಿಕೆ ಅಡಿಯಲ್ಲಿ ಶ್ರೀರಾಘವೇಂದ್ರ ಸ್ವಾಮಿ ಮಠ ಬಿದ್ದಾಪುರ ಕಾಲೋನಿ ಕಲಬುರಗಿಯಲ್ಲಿ ವಿಶೇಷ ಸುಗಮ ಸಂಗೀತ ಕಾರ್ಯಕ್ರಮವನ್ನು ಶನಿವಾರ ದಿನಾಂಕ 13-07-2024 ರಂದು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಶ್ರೀ ಜಯರಾವ ಕುಲಕರ್ಣಿ, ಉದ್ಘಾಟಕರಾಗಿ ಶ್ರೀ ಕಿರಣಕುಮಾರ ಕುಲಕರ್ಣಿ ಹಾಗೂ ಮುಖ್ಯ ಅಥಿತಿಗಳಾಗಿ ಶ್ರೀ ಕನಕಗಿರಿ ಆಚಾರ, ಶ್ರೀ ದೀಲಿಪ ಪೋದ್ದಾರ ಅವರು ಆಗಮಿಸಿದ್ದರು. ಅಧ್ಯಕ್ಷರಾದ ಡಾ. ರವೀಂದ್ರ ಕುಲಕರ್ಣಿ ಎಲ್ಲರನ್ನು ಸ್ವಾಗತಿಸಿದರು.
ಸಂಗೀತ ಕಾರ್ಯಕ್ರಮದಲ್ಲಿ ಕು.ಅನಘಾ ಶರ್ಮಾ ಇವರ ದಾಸವಾಣಿಗೆ ಹಂಸಧ್ವನಿ ಕಲಾನೀಕೆತನದ ತಬಲಾ ವಿದ್ಯಾರ್ಥಿಗಳಾದ ಕುಮಾರ ವೆಂಕಟೇಶ ಕುಲಕರ್ಣಿ ಮತ್ತು ಸಾರ್ಥಕ ರವೀಂದ್ರ ಕುಲಕರ್ಣಿ ತಬಲಾ, ಹಾರ್ಮೋನಿಯಂ ಸಾವಿತ್ರಿ ಥಿಟೆ ಅವರು ಸಾಥ ನೀಡಿದರು.
ಹಂಸಧ್ವನಿ ಕಲಾನೀಕೆತನದ ವಿದ್ಯಾರ್ಥಿಗಳಿಂದ ತಾಳವಾದ್ಯ ಚಳ್ಳಂ ಪ್ರದರ್ಶನವಾಯಿತು ಶ್ರೀಕಾಂತ ಮಾನೆ ಮತ್ತು ಸಮರ್ಥ ಲಾಡೆ ತಬಲಾ ಸಾಥ ನೀಡಿದರು.