ಸಂಡೂರು ಉಪ ಚುನಾವಣೆಗೆನಮಗೆ ಟಿಕೆಟ್ ನೀಡಿ: ದೇವೇಂದ್ರಪ್ಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,20- ಮುಂಬರುವ ಸಂಡೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆಬಿಜೆಪಿಯಿಂದ  ನಮಗೆ ಟಿಕೆಟ್ ನೀಡಿ ಎಂದು ಮಾಜಿ ಸಂಸದ ವೈ.ದೇವೇಂದ್ರಪ್ಪ ಬೇಡಿಕೆ ಇಟ್ಟಿದ್ದಾರೆ.
ಅವರಿಂದು ಸಂಡೂರಿನ ವಂಡರ್ ವ್ಯಾಲಿ ರೆಸಾರ್ಟ್‌ ನಲ್ಲಿ‌ನಡೆದ ಪಕ್ಷದ  ಜಿಲ್ಲಾ ವಿಶೇಷ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಮುನ್ನ ಸಂಜೆವಾಣಿಯೊಂದಿಗೆ ಮಾತನಾಡಿ. ಹಾಲಿ ಸಂಸದನಾಗಿದ್ದ ನನಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಲಿಲ್ಲ. ಅದಕ್ಕಾಗಿ ಈ ಉಪಾ ಚುನಾವಣೆಯ ಟಿಕೆಟ್ ನ್ನು ನನಗೆ ಇಲ್ಲ ನನ್ನ ಮಗ ಅಣ್ಣಪ್ಪ ಅವರಿಗೆ ನೀಡಲಿ ಎಂದಿದ್ದಾರೆ.
ಬೇಡಿಕೆ ನನ್ನದು ಆದರೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದರು.
ಬಲ್ಲ ಮೂಲಗಳ ಪ್ರಕಾರ ಸಧ್ಯ ಸಂಡೂರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು, ಬಳ್ಳಾರಿಯ ಮಾಜಿ ಸಚಿವ ಶ್ರೀರಾಮುಲು,  ಕೆ.ಎಸ್.ದಿವಾಕರ್,  ಸಂಡೂರಿನ ಪ್ರಹ್ಲಾದ್, ಅಂಕಮನಾಳ್ ಗಂಡಿ ಮಾರೆಪ್ಪ ಸೆರಿದಂತೆ ಹತ್ತಕ್ಕೂ ಹೆಚ್ಚಿನ ಜನ ಆಕಾಂಕ್ಷಿಗಳಾಗಿದ್ದಾರೆ.