ನಾಗೇಂದ್ರ ಬಾಯಿ ಬಿಟ್ಟರೆ ಸಿದ್ರಾಮಯ್ಯ ಸರ್ಕಾರ ಪತನ: ವಿಜಯೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,20- ಮಾಜಿ ಸಚಿವ ನಾಗೇಂದ್ರ ಬಾಯಿ ಬಿಟ್ಟರೆ ಸಿಎಂ ಮತ್ತು ಡಿಸಿಎಂ ಅವರಿಗೆ ವಾಕ್ಮೀಕಿ ನಿಗಮದ ಹಗರಣ ತಗುಲಿ ಹಾಕಿಕೊಳ್ಳಲಿದೆಂದು. ನಾಗೇಂದ್ರ ಮತ್ತು ದದ್ದಲ ಅವರು ಹಗರಣದಲ್ಲಿ ಇಲ್ಲ ಎಂದು  ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನಾಗೇಂದ್ರ ಬಾಯಿ ಬಿಟ್ಟರೆ ಈ ಸರ್ಕಾರ ಪತನವಾಗಲಿದೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಅವರಿಂದು ಸಂಡೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ.  ತಮ್ಮ ಬುಡಕ್ಕೆ ಬರುವುದನ್ನು ತಪ್ಪಿಸಿಕೊಳ್ಳಲು ಹಗರಣಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳು ಅಸಮರ್ಥರಿದ್ದಾಗ ಈ ರೀತಿ ಹಗರಣಗಳನ್ನು ಅಧಿಕಾರಿಗಳು ಮಾಡುತ್ತಾರೆ.  ಸಚಿವರ ಮೌಖಿಕ ಆದೇಶದಿಂದ ಈ ಹಗರಣ ನಡೆದಿದೆಂದರು.
ಚುನಾವಣೆಗೆ ಪರಿಶಿಷ್ಟರ ಅಭಿವೃದ್ಧಿ ಹಣವನ್ನು ಕೊಳ್ಳೆ ಹೊಡೆದು ಚುನಾವಣೆಗೆ ಬಳಸಿಕೊಂಡಿದ್ದಾರೆ. ಆದರೂ ಇದಕ್ಕೂ ನಮಗೆ ಸಂಬಂಧ ಇಲ್ಲ ಎನ್ನುವಂತೆ ಸಿಎಂ ವರ್ತಿಸುತ್ತಿದ್ದಾರೆಂದರು.
ನಾವು ಬಿಜೆಪಿ ಅವಧಿಯಲ್ಲಿನ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದಾರೆ ಮುಖ್ಯ ಮಂತ್ರಿಗಳು. ಅವರನ್ನು ಯಾರು ತಡೆದಿಲ್ಲ ತನಿಖೆ ಮಾಡಿ ಎಂದು ಸವಾಲು ಹಾಕಿದರು ವಿಜಯೇಂದ್ರ ಅವರು.
ಕದ್ದ ಮಾಲು ವಾಪಸ್ ಬಂದಿದೆಂದು ಹೇಳುತ್ತಿದ್ದಾರೆ ಇದು ಸರಿಯೇ ಮುಖ್ಯ ಮಂತ್ರಿಗಳೇ. ಬಳಸಿಕೊಂಡ ಹಣವನ್ನು ಪಡೆದ ಜನತೆಗೆ ಹಣ ನೀಡಿ ಮತ್ತೆ ಜಮಾ ಮಾಡಿಸಿ ಹಣ ವಾಪಸ್ಸು ಪಡೆದಿದ್ದೇವೆ ಎಂದು ಲೆಕ್ಕ ಹೇಳುತ್ತಿದ್ದಾರೆ. ಹಾಗಾದರೆ ಭ್ರಷ್ಟಾಚಾರ ನಡೆದಿಲ್ಲವಾ ಎಂದರು.