ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಕಳ್ಳನ ಬಂಧನ
ಜೇವರ್ಗಿ:ಜು.20: ಪಟ್ಟಣದ ಶಾಸ್ತ್ರಿ ಚೌಕ ಬಡಾವಣೆಯ ಮುಖ್ಯರಸ್ತೆಯ ಪಕ್ಕದಲ್ಲಿರುವ ಎ ಟಿ ಎಂ ನಲ್ಲಿರುವ ಹಣ ಕಳ್ಳತನಕ್ಕೆ ಯತ್ನ ಮಾಡಿದ ವ್ಯಕ್ತಿಯನ್ನು ನಮ್ಮ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪಿ ಎಸ್ ಐ ಸುರೇಶ ಕುಮಾರ ಚೌವ್ಹಾಣ ತಿಳಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆ ಪಕ್ಕದಲ್ಲಿರುವ ಎಸ್ ಬಿ ಐ ಬ್ಯಾಂಕಿನ ಎಟಿಎಂ ಬಾಗಿಲು ತೆರೆದು ಹಣ ದೊಚ್ಚಲು ಯತ್ನಿಸುತ್ತಿರುವಾಗಲೇ ನಮ್ಮ ಪೆÇಲೀಸ್ ಸಿಬ್ಬಂದಿಗಳನ್ನು ನೋಡಿದ ತಕ್ಷಣ ಹಣದೋಚಲು ಬಂದ ವ್ಯಕ್ತಿ ಪರಾರಿಯಾಗಿದ್ದಾನೆ. ನಂತರ ಬೆಳಗ್ಗೆ ನಮ್ಮ ಪೆÇಲೀಸ್ ಸಿಬ್ಬಂದಿಗಳು ಮತ್ತು ಕ್ರೈಂ ಪಿ ಎಸ್ ಐ ಅವರ ನೇತೃತ್ವದಲ್ಲಿ ನಮ್ಮ ಶ್ವಾನದಳದೊಂದಿಗೆ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯ ಹುಡುಕಾಟ ಪ್ರಾರಂಭ ಮಾಡಿದರು. ನಂತರ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿ ನಮ್ಮ ಸಿಬ್ಬಂದಿ ಹುಡುಕಿ ಪೆÇಲೀಸ್ ಠಾಣೆಗೆ ಕರೆದುಕೊಂಡು ಬಂದರು. ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪಿ ಎಸ್ ಐ ಸುರೇಶ ಕುಮಾರ ಚೌವ್ಹಾಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರೈಂ ಪಿ ಎಸ್ ಐ ಸಿದ್ದರಾಮ, ಸಿದ್ದಣ್ಣ ಪಿ ಸಿ, ಶ್ರೀಮಂತ ನೇರಡಗಿ, ಪೆÇಲೀಸ್ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಮ್ಯಾನೇಜರ್ ಉಪಸ್ಥಿತರಿದ್ದರು.