ಕಾಂಗ್ರೆಸ್‍ನಿಂದ ತಳ ಸಮುದಾಯಗಳಿಗೆಅನ್ಯಾಯ: ಸಂತೋಷ ಹಾದಿಮನಿ
ಕಲಬುರಗಿ:ಜು.20: ಗ್ಯಾರಂಟಿ ಜಾರಿಗೆ ಹಣ ಹೊಂದಿಸುವ ಸಲುವಾಗಿ ಕಾಂಗ್ರೆಸ್
ಸರ್ಕಾರ ಎಸ್ಸಿಪಿ, ಟಿಎಸ್ಟಿ ಹಣ ದುರ್ಬಳಕೆ ಮಾಡಿ ಪರಿಶಿಷ್ಟ ಜಾತಿ ಹಾಗೂ
ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ
ಕಾರ್ಯದರ್ಶಿ ಸಂತೋಷ ಹಾದಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
187
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾಲ್ಮೀಕಿ ನಿಗಮದಲ್ಲಿ
ರೂ. ದುರ್ಬಳಕೆಯಾಗಿದೆ, ಮೂಡಾದಲ್ಲಿ ಸ್ವತ:
ಮುಖ್ಯಮಂತ್ರಿಗಳೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ದಲಿತರ
ಕಲ್ಯಾಣಕ್ಕಾಗಿ ಮೀಸಲಿಟ್ಟ ಎಸ್ಸಿಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಗೆ 6 ಸಾವಿರ ಕೋಟಿ ರೂ. ಎಸ್‍ಸಿಪಿ, ಟಿಎಸ್ಪಿ ಹಣ ಬಳಕೆ
ಮಾಡಿಕೊಂಡಿದ್ದಾರೆ. ಗ್ಯಾರೆಂಟಿಗಳಿಗೆ 16000 ಕೋಟಿ ರೂ. ದಲಿತರ ಕೋಟಾದಿಂದ
ವರ್ಗಾವಣೆ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ
ಸಚಿವ ಹಾಗೂ ಶಾಸಕರು ಏನು ಮಾಡುತ್ತಿದ್ದೀರಿ ?. ಅದನ್ನು ಕೇಳಲು ಧೈರ್ಯ ಇಲ್ಲವೇ
ಎಂದು ಪ್ರಶ್ನಿಸಿದ್ದಾರೆ.
ಮಾತೆತ್ತಿದರೇ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರುಗಳು ಹಾಗೂ
ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಭಾಷಣ ಮಾಡುವವರು ಈಗೇನು
ಮಾಡುತ್ತಿದ್ದಾರೆ?. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸಂವಿಧಾನಬದ್ಧವಾಗಿ
ದೊರಕಬೇಕಿದ್ದ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ತಡೆ ಹಿಡಿಯಲಾಗುತ್ತಿದೆ. ರಾಜ್ಯದಲ್ಲಿ
ಭ್ರಷ್ಟಾಚಾರ ಮೀತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಅಧಿವೇಶನದಲ್ಲಿ ತಿದ್ದುಪಡಿಗೊಂಡ ಎಸ್ಸಿಪಿಟಿಎಸ್ಪಿ ಅಧಿನಿಯಮದ ಉಪಪ್ರಕರಣ
ಡಿಯನ್ನು ರದ್ದು ಪಡಿಸಿರುವ ಮುಖ್ಯ ಮಂತ್ರಿಗಳು ಈಗ ಆ ಹಣವನ್ನು ಬೇರೆ ಕಡೆ ವರ್ಗಾಯಿಸಿ
ತಾವೇ ಕಾನೂನಿನ ಉಲ್ಲಂಘನೆ ಮಾಡಿರುವುದು ಪ್ರಜಾಪ್ರಭುತ್ವ ಮತ್ತ ಸಂವಿಧಾನಕ್ಕೆ ನೀಡುವ
ಗೌರವವೇ ಎಂದು ಪ್ರಶ್ನಿಸಿದ್ದಾರೆ.
ದಲಿತರ ಪರ ಎಂದು ಹೇಳುವ ಕಾಂಗ್ರೆಸ್ ನಾಯಕರು ದಲಿತರ ಮತ ಪಡೆದು ಅಧಿಕಾರಕ್ಕೆ
ಬಂದು ಈಗ ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವ ದಲಿತರನ್ನು ಅವಕಾಶಗಳಿಂದ
ವಂಚಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಹೆಸರಿನಲ್ಲಿ 100 ಹಾಸ್ಟೆಲ್ ನಿರ್ಮಾಣ
ಮಾಡಲು ಘೋಷಣೆ ಮಾಡಿತ್ತು ಹಿಂದುಳಿದ ವರ್ಗದ ಹಾಸ್ಟೆಲ್ ಸಹ ನಿರ್ಮಾಣ ಮಾಡಲು
ತೀರ್ಮಾನಿಸಿತ್ತು ಅವೆಲ್ಲವುಗಳನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ದಲಿತ ವರ್ಗಗಳ ಬಗ್ಗೆ ಕಾಳಜಿ ಇಲ್ಲ. ಕೇವಲ ಮಾತಿನಲ್ಲಿ ಮಾತ್ರ
ಸಾಮಾಜಿಕ ನ್ಯಾಯ ಎಂದು ಹೇಳುತ್ತದೆ ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷವು ದಲಿತರ
ವಿರೋಧಿಯಾಗಿದೆ. ದಲಿತ ಸಮುದಾಯದ ಮತಗಳನ್ನು ಪಡೆಯಲು ಮಾತ್ರ ಕಾಂಗ್ರೆಸ್
ಹವಣ ಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಕುರಿತು ದಲಿತ ಸಚಿವರು,
ಶಾಸಕರು ಧ್ವನಿ ಎತ್ತದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
