ಶ್ರೀಮದ್ ಕಾಶೀ ಜಗದ್ಗುರುಗಳ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ
ಕಲಬುರಗಿ :ಜು.20: ಶ್ರೀಮದ್ ಕಾಶೀe್ಞÁನ ಸಿಂಹಾಸನಾಥೀಶ್ವರ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಾಶೀ ಪೀಠ ಇವರಿಂದ 17ನೇ ವರ್ಷದ ಆಶಾಢಮಾಸದ ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ತಿಳಿಸಿದ್ದಾರೆ.
ನಗರದ ಸೊಗಸಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಕಡಗಂಚಿಯ ವೀರತಪಸ್ವಿ ಶ್ರೀ ವೀರಭದ್ರ ಶಿವಾಚಾರ್ಯರರ ನೇತೃತ್ವದಲ್ಲಿ ದಿನಾಂಕ 28 ರವಿವಾರ ಸಾಯಂಕಾಲ 8 ಗಂಟೆಗೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪ್ರವಚನ ಕಾರ್ಯಕ್ರವು ಉದ್ಘಾಟಿಸುವರು.
ಪ್ರತಿ ದಿವಸ ಕಾಶೀ ಜಗದ್ಗುರುಗಳ ಇಷ್ಠಲಿಂಗ ಬಹಿರಂಗ ಮಹಾಪೂಜೆ ಅಗಸ್ಟ 1 ವರೆಗೆ ಜರಗುವುದು. 2ರಂದು ಮುಂಜಾನೆ 9 ಗಂಟೆಗೆ ಶ್ರೀ ಗಂಜ ಹನುಮಾನ ದೇವಾಲಯದಿಂದ ಶ್ರೀಮದ್ ಕಾಶೀ ಜಗದ್ಗರುಗಳವರ ಸಾರೋಟಿಯಲ್ಲಿ ಮೆರವಣಿಗೆ ಜರಗುವುದು. ಮದ್ಯಾಹ್ನ 3 ಗಂಟೆಗೆ ಧರ್ಮಸಭೆಯ ನಂತರ ಕಾರ್ಯಕ್ರಮ ಮಂಗಲಗೊಳ್ಳುವುದು. ಈ ಕಾರ್ಯಕ್ರಮಕ್ಕೆ ಅನೇಕ ರಾಜಕೀಯ ಮುಖಂಡರು, ಶಿವಾರ್ಚಾರು ಹರಗುರು ಚರಮೂರ್ತಿಗಳು, ಧರ್ಮಾಭಿಮಾನಿಗಳು ಪಾಲ್ಗೋಳ್ಳುವರು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪ್ರವಚನ, ದರ್ಶನಾಶೀರ್ವಾದ ಪಡೆಯಬೇಕೆಂದು ಆಲಗೂಡಕರ್ ತಿಳಿಸಿದ್ದಾರೆ.