ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮೈಲಿಗಲ್ಲು ಚಂದ್ರಯಾನ-3
ಕಲಬುರಗಿ:ಜು.20: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನಿಗೂ ಭೂಮಿಗೆ ನಂಟು. ಚಂದ್ರನಲ್ಲಿರುವ ವಾತಾವರಣೆ ಸೇರಿದಂತೆ ಅಲ್ಲಿನ ಮಾಹಿತಿಯ ಬಗ್ಗೆ ವ್ಯಾಪಕವಾಗಿ ಸಂಸೋಧನೆ ಜರುಗುತ್ತಿದ್ದು, ಈ ನಿಟ್ಟನಿಲ್ಲಿ ಭಾರತ ಇತ್ತೀಚಿಗೆ ಚಂದ್ರಯಾನ-3ರ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಜೇವರ್ಗಿ ಸರ್ಕಾರಿ ಪಇಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಶಂಕರ ಹೊಸದೊಡ್ಡಿ ಹೇಳಿದರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಶಿವಲಿಂಗ ನಗರದಲ್ಲಿರುವ ‘ಮಹಾತ್ಮ ಕಾನ್ವೆಂಟ್ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಚಂದ್ರ’ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಮಾನವ ಪ್ರಥಮ ಬಾರಿಗೆ 1969ರ ಜುಲೈ 20ರಂದು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ದಿನವಾಗಿದೆ. ಅದರ ಸ್ಮರಣಾರ್ಥವಾಗಿ ‘ಚಿಶ್ವ ಚಂದ್ರ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಗ್ರಹಗಳು, ಆಕಾಶಕಾಯಗಳು, ವಿಜ್ಞಾನದ ವಿಷಯಗಳ ಬಗ್ಗೆ ತಿಳಿದುಕೊಂಡು, ಮುಂದೆ ನೀವು ದೊಡ್ಡ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀಪುತ್ರ ನೆಲ್ಲೂರ, ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಬಂಡಿ, ಶಿಕ್ಷಕರಾದ ನಾಗರಾಜ ಕೋಟನೂರ, ಲಕ್ಷ್ಮೀ ಗೊಮದ್, ವೈಷ್ಣವಿ ಸೋನಾರ, ವೈಷ್ಣವಿ ಪಾಟೀಲ, ಸೇವಕಿ ಮಾಣಿಕಮ್ಮ ಕ್ಷೇತ್ರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.