ಅವಿರೋಧ ಆಯ್ಕೆ
ನವಲಗುಂದ ,ಜು20 : ತಾಲ್ಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಚುನಾವಣೆಯು ಶುಕ್ರವಾರ ಪಟ್ಟಣದ ಪಿ ಎಲ್ ಡಿ ಬ್ಯಾಂಕ್ ಸಭಾ ಭವನದಲ್ಲಿ ಜರುಗಿತು
ಅಂದಾನಯ್ಯ ಹಿರೇಮಠ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುಪ್ರಸಾದ ದೇಸಾಯಿಗೌಡ ಪಾಟೀಲ್ (ಶೆಲವಡಿ) ಅವರು ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶ್ರೀದೇವಿ ಕುಲಕರ್ಣಿ ಘೋಷಣೆ ಮಾಡಿದರು.
ಈ ವೇಳೆ ನೂತನ ಅಧ್ಯಕ್ಷ ಗುರುಪ್ರಸಾದ ಪಾಟೀಲ್ ಬ್ಯಾಂಕ್ ನಿರ್ದೇಶಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ, ಉಪಾಧ್ಯಕ್ಷರಾದ ಎಲ್ ಎಮ್ ನಿಡವನಿ ನಿರ್ದೇಶಕರಾದ , ಜಿ ಬಿ ಮನಮಿ, ಎಮ್ ಎಪ್ ಬಾಳಗೌಡ್ರ, ಬಿ ಎಸ್ ಕುರಹಟ್ಟಿ, ಎಮ್ ಬಿ ಹಿರೇಗೌಡ್ರ, ಪಿ ಕೆ ಪಾಟೀಲ್, ಎಸ್ ಜಿ ಸಂಕನಗೌಡ್ರ, ಜಿ ಎಸ್ ಮಡಿಮಾಳರ, ಎಮ್ ಡಿ ತಳವಾರ, ವಿ ಎಸ್ ಹಿರೇಮಠ, ವಿ ಆರ್ ಮಾದರ, ಹಿರಿಯರಾದ ಜಿ ಎಮ್ ಸಂಕನಗೌಡ್ರ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಾಪುಗೌಡ ಪಾಟೀಲ್, ಬಸನಗೌಡ ಪಾಟೀಲ್ ( ಅಮರಗೋಳ) ಎನ್ ವಿ ಪಾಟೀಲ್, ಹಾಗೂ ಬ್ಯಾಂಕ್ ಸಿಬ್ಬಂದಿಗಳು ಇದ್ದರು.