ಶ್ರೀ ಸಾಯಿ ಮಹಾಪೂಜೆ
ಮುನವಳ್ಳಿ,ಜು20: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ದಿ.21 ರಂದು ಬೆಳಗ್ಗೆ ಕಾಕಡಾರತಿ, ಮಹಾರುದ್ರಾಭಿಷೇಕ, ಪಾರಾಯಣ ಮಂಗಲ, ಪಲ್ಲಕ್ಕಿ ಉತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಮಹಾಮಂಗಳಾರತಿ ಜರಗುವುದು. ಮಹಾಪ್ರಸಾದದೊಂದಿಗೆ ಮಂಗಳವಾಗುವದು ಎಂದು ಶ್ರೀ ಸಾಯಿ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುವರು.