ವಿದ್ಯಾರ್ಥಿಗಳೊಂದಿಗೆ ಸಂವಾದ
ಗುಳೇದಗುಡ್ಡ,ಜು20: ಬಾಗಲಕೋಟ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಾಲೂಕಿನ ಹಂಗರಗಿ, ಕೋಟೆಕಲ್ಲ, ಹಾನಾಪೂರ ಎಸ್‍ಪಿ ಗ್ರಾಮಪಂಚಾಯತಿಗಳಿಗೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದರು. ಕೋಟಿಕಲ್ಲ ಗ್ರಾಮ ಪಂಚಾಯತಿಯ ಸಂಜೀವಿನಿ ಶೆಡ್ ಪರಿಶೀಲನೆ ನಡೆಸಿದರು.
ನಂತರ ಹಾನಾಪೂರ ಎಲ್.ಟಿ. ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿದ್ದ ಶೌಚಾಲಯ ನಿರ್ಮಾಣ ಕಾಮಗಾರಿ, ಶಾಲೆಯ ಮೈದಾನ, ಕಬಡ್ಡಿ ಗ್ರೌಂಡಗಳ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಬಳಿಕ ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರ, ಬಿಸಿಯೂಟ, ಶಾಲೆಯ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಕೊಠಡಿಗೆ ಹೋಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ಹಾಗೂ ಗಣಿತ ವಿಷಯದ ಬಗ್ಗೆ ಸಂವಾದ ನಡೆಸಿದರು. ಈಗಿನಿಂದಲೇ ಶ್ರದ್ಧೆಯಿಂದ ಓದಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಕಳೆದ ಬಾರಿ ಈ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಕಡಿಮೆಯಾಗಿದ್ದು, ಈ ಬಾರಿ ಫಲಿತಾಂಶ ಸುಧಾರಿಸುವಂತೆ ಶಾಲೆಯ ಮುಖ್ಯಗುರುಮಾತೆಗೆ ಸೂಚನೆ ನೀಡಿದರು,
ಈ ಸಂದರ್ಭದಲ್ಲಿ ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ, ತಾಂತ್ರಿಕ ಸಹಾಯಕ ವಿಜಯಕುಮಾರ ಚಿಂದಿ, ಪಿಡಿಓಗಳಾದ ಸುನೀತಾ ಅಂಕೋಲಾ, ಆರತಿ ಕ್ಷತ್ರಿ, ಗ್ರಾಪಂ ಸದಸ್ಯ ಗಣೇಶ ನಾಯಕ, ವಿಆರ್‍ಡಬ್ಲೂ ಶಿವಾಜಿ ಚವ್ಹಾಣ, ಶಾಲೆಯ ಮುಖ್ಯಗುರುಮಾತೆ ಆರ್.ಬಿ. ಹುಣಶಿಮರದ, ಎಸ್.ಪಿ. ಕಂದಗಲ್ಲ, ಎಸ್.ಪಿ. ಧಾರವಾಡ ಮತ್ತಿತರರು ಇದ್ದರು.