ಆಸಾರಾಮಜೀ ಆಶ್ರಮದಲ್ಲಿ ಗುರುಪೂರ್ಣಿಮೆ ನಾಳೆ
ಕಲಬುರಗಿ,ಜು.20-ಗುರು ಶಿಷ್ಯರ ಮಹಾನ್ ಪರ್ವವಾದ ಗುರುಪೂರ್ಣಿಮೆಯ ನಿಮಿತ್ಯ ನಗರದ ಮೋಹನ್ ಲಾಡ್ಜ್ ಹತ್ತಿರವಿರುವ ಸಂತ ಶ್ರೀ ಆಸಾರಾಮಜೀ ಆಶ್ರಮದಲ್ಲಿ ಜು.21 ರಂದು ಗುರುದೇವರ ಪಾದುಕೆಯ ಪೂಜೆ, ಮಹಾಮೃತ್ಯುಂಜಯ ಹವನ, ಶ್ರೀ ಆಶಾರಾಮಾಯಣ ಪಠಣ, ಆರತಿ ಮತ್ತು ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಸಾಧಕ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶ್ರೀಯೋಗ ವೇದಾಂತ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ವೈ.ಪಾಟೀಲ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.