ಯುವನಿಧಿಗೆ ನೋಂದಣಿಯಾದವರು ಪ್ರತಿ ತಿಂಗಳು ಸ್ವಯಂಘೋಷಣೆ ಕಡ್ಡಾಯ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ
ಯಾದಗಿರಿ : ಜು.20 : ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ 3130 ಫಲಾನುಭವಿ ಪದವಿಧರರಿಗೆ 3000 ರೂ ಮತ್ತು ಡಿಪೆÇ್ಲೀಮಾ ಅಭ್ಯರ್ಥಿಗಳಿಗೆ 1500 ಒಟ್ಟು 93,75,000 ಹಣವನ್ನು ನೇರವಾಗಿ ಡಿಬಿಟಿ ಮೂಲಕ ಅವರ ಖಾತೆಗೆ ಜಮಾ ಮಾಡಲಾಗಿದೆ.ಇನ್ನೂ ಹೆಚ್ಚಿನ ನೋಂದಣಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.