ಮೌಲ್ಯಗಳು ಮಾನವಜೀವನದ ಶೃಂಗಾರ: ಬ್ರಹ್ಮಾಕುಮಾರಿ ಸರೋಜಾ ದೀದಿ ಅಭಿಮತ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.20- ಜೀವನದ ಮೌಲ್ಯಗಳ ಕೊರತೆಯಿಂದಇಂದು ಮನುಷ್ಯನುಒತ್ತಡದಲ್ಲಿ ಸಿಲುಕಿ ಅಶಾಂತಿಜೀವನ ನಡೆಸುತ್ತಿದ್ದಾನೆಜೀವನವು ಸುಖಮಯವಾಗಬೇಕಾದರೆಅಂತರಂಗದ ಮೌಲ್ಯಗಳ ಕಡೆ ಸಲ್ಪ ಸಮಯವಾದರೂಗಮನಕೊಡಬೇಕು ಮೌಲ್ಯಗಳು ಜೀವನದ ಶೃಂಗಾರಎಂದು ಬೆಂಗಳೂರು ಕುಮಾರ ಪಾರ್ಕ್‍ಉಪವಲಯ ಪ್ರಜಾಪಿತ ಬ್ರಹ್ಮಾಕುಮಾರಿಈಶ್ವರೀಯ ವಿಶ್ವ ವಿದ್ಯಾಲಯಗಳ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಸರೋಜಾ ದೀದಿ ಅಭಿಪ್ರಾಯಪಟ್ಟರು.
ಅವರು ನಗರದಅಂತರಾಷ್ಟ್ರೀಯಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ 33ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೇಗೆ ಜಗತ್ತಿನಲ್ಲಿ ಹಣವನ್ನು ಸಂಪಾದನೆ ಮಾಡಿ ಹಣವಂತರಾಗುತ್ತಾರೋ ಹಾಗೆ ಜೀವನದಲ್ಲಿ ಗುಣಗಳ ಕಡೆ ಗಮನ ಕೊಡುವುದರ ಮೂಲಕ ಗುಣವಂತರಾಗಬೇಕೆಂದುಕರೆ ನೀಡಿದರು. ಗುಣವಂತರಾಗಲು ಸಕಾರಾತ್ಮಕಚಿಂತನೆಯಆಲೋಚನೆಯನ್ನು ಬೆಳೆಸಿಕೊಳ್ಳಲು ಅವಶ್ಯಕತೆಇದೆಎಂದರು.
ಸ್ವಾಮಿ ವಿವೇಕಾನಂದ ಸದ್ಭಾವನಾರಾಜ್ಯ ಪ್ರಶಸ್ತಿ ಪುರಸ್ಕøತರಾದರಾಜಯೋಗಿನಿ ಬ್ರಹ್ಮಾಕುಮಾರಿದಾನೇಶ್ವರೀಜೀ ಮಾತನಾಡಿ 33 ವರ್ಷಗಳಿಂದ ಈಶ್ವರೀಯ ವಿಶ್ವ ವಿದ್ಯಾಲಯವು ಸಾರ್ವಜನಿಕವಾಗಿಜನರಒತ್ತಡವನ್ನುಕಡಿಮೆ ಮಾಡಲುರಾಜಯೋಗ ಶಿಕ್ಷಣ ಉಚಿತವಾಗಿ ನೀಡುತ್ತಾ ಬಂದಿದೆ. ಜೀವನಕೌಶಲ್ಯದಅಭಿವೃದ್ಧಿಗಾಗಿ ಸರಾತ್ಮಕಚಿಂತನೆಯು ಮನೋಬಲವನ್ನು ನೀಡುತ್ತದೆ ಮನಸ್ಸನ್ನು ಸುಂದರವಾದ ಹೂ ತೋಟವನ್ನಾಗಿ ಮಾಡಿಕೊಳ್ಳಲು ಆಧ್ಯಾತ್ಮಿಕತೆಯುಆಧಾರವಾಗಿದೆಎಂದರು.
ಇದೇ ಸಂದರ್ಭದಲ್ಲಿಈಶ್ವರಿಯ ವಿಶ್ವವಿದ್ಯಾಲಯದ ಸೇವೆಯಲ್ಲಿ 33 ವರ್ಷಗಳಿಂದ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಓಂ ಶಾಂತಿ ನ್ಯೂಸ್ ಸರ್ವಿಸ್‍ನ ಬಿಕೆ ಆರಾಧ್ಯರವರನ್ನು ಸನ್ಮಾನಿಸಲಾಯಿತು. ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ 15 ಸಮರ್ಪಿತರಾಜಯೋಗ ಶಿಕ್ಷಕಿಯರನ್ನೂ ಸಹ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಶ್ರೀನಿವಾಸ್ ನಾಗರಾಜ್ ಸತೀಶ್ ಸಿದ್ದಯ್ಯ ಜಯರಾಮ್ ಬಿಕೆ ವೀಣಾ, ಬಿಕೆ ಶಾಂಭವಿ,ಗೀತಾ, ಆಶಾ, ಸುಲೋಚನಾ, ಸುಕನ್ಯ, ಪುಟ್ಟಶೇಖರ ಮೂರ್ತಿ,ತ್ರಿವೇಣಿ ಹಾಜರಿದ್ದರು