ಮಹದೇಶ್ವರ ಬೆಟ್ಟಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ
ಸಂಜೆವಾಣಿ ವಾರ್ತೆ
ಹನೂರು ಜು 20 :- ಭಾರತ ಸರ್ಕಾರ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರು ಭಾರತ ಸರ್ಕಾರ ವಿ ಸೋಮಣ್ಣ ರವರು ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಲೆ ಮಾದಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಇದೇ ವೇಳೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾತನಾಡಿ ನಮ್ಮ ಮನೆಯ ದೇವರು ಶ್ರೀ ಮಲೆ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇನೆ. ನಾನು ಇವತ್ತಿನಿಂದಲ್ಲ ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ಶ್ರೀ ಕ್ಷೇತ್ರಕ್ಕೆ ಬಂದಿದ್ದೇನೆ. ನಮ್ಮ ತಾಯಿ ಆಗಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಕರೆದುಕೊಂಮಡು ಬರುತಿದ್ದರು.
ನನ್ನ ಮತ್ತೊಂದು ಆರಾದ್ಯ ದೈವ ಪರಮ ಪೂಜ್ಯ ಆಧಿಚುಂಚನಗಿರಿ ಪರಮಪೂಜ್ಯ ವೀರಗಂಗಾಧರ ಹಾಗೂ ನಿರ್ಮಲನಂದ ಗುರುಗಳು. ನಮ್ಮ ಸಂಸ್ಕಾರವನ್ನು ರೂಪಿಸಿಕೊಳ್ಳುವುದಕ್ಕೆ ನಮ್ಮ ತಂದೆ ತಾಯಿಯ ಆಶಿರ್ವಾದ ಎಷ್ಟು ಮುಖ್ಯನೋ ಭಗವಂತನ ಆಶೀರ್ವಾದ ಈ ಮುಖ್ಯ ಎಂದರು.
ಕೇಂದ್ರ ಮಂತ್ರಿಯಾದ ನಂತರ ತೆಲಂಗಾಣ ಆಂಧ್ರ, ಕರ್ನಾಟಕ ಹಾಗೂ ಬೇರೆ ಬೇರೆ ರಾಜ್ಯದ ಭೇಟಿ ನೀಡಿರುವುದು ಖುಷಿ ಕೊಟ್ಟ ವಿಚಾರ. ಜಲಶಕ್ತಿ ಮತ್ತು ರೈಲ್ವೇ ಇಲಾಖೆ ಎರಡು ನೂತನ ಜವಾಬ್ದಾರಿ ಇದೆ.
ಚಾಮರಾಜನಗರಕ್ಕೂ 29ಕೋಟಿ ರೂ. ಕೊಟ್ಟಿದ್ದು ಆಧುನಿಕಕರಣ ನೀಡಿದ್ದು, ರಾಜ್ಯದಲ್ಲಿ 59 ರೇಲ್ವೆ ನಿಲ್ದಾಣಗಳಲ್ಲಿ 54 ನಿಲ್ದಾಣ ತಗೊಂಡಿದ್ದೇವೆ. ಇನ್ನು ಉಳಿಕೆ ಇದ್ದು ಅದನ್ನು ಅಭಿವೃದ್ದಿಗಾಗಿ ತೆಗೆದುಕೊಳ್ಳಲಾಗುವುದು. ನಮ್ಮ ಸರ್ಕಾರ ಬಂದಮೇಲೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ನಾಲ್ಕು ವರ್ಷ ರಾಜಕಾರಣ ಬೇಡ, ಅಭಿವೃದ್ದಿ ಮಾಡೋಣ ಕೆಲಸದ ಬಗ್ಗೆ ಗಮನ ನೀಡಿ ಎಂದು ಹೇಳಿದ್ದೇನೆ. ಚಾಮರಾಜನಗರ ರೈಲ್ವೆ ಯೋಜನೆ ಕನಕಪುರ ಹಾರೋಹಳ್ಳಿ, ಸತಾನೂರು ಹಲಗೂರು ಕೊಳ್ಳೇಗಾಲ ಸಂತೆಮರಳ್ಳಿ, ಚಾಮರಾಜನಗರ 142ಕಿ. ಮೀ ರೈಲ್ವೇ ಕಾಮಗಾರಿ ಯೋಜನೆಯನ್ನು ಪ್ರಸ್ತಾವನೆ ಮಾಡಿದ್ದೇನೆ.
ಒಂದೇ ಮಂಗಳೂರು ಆರ್ಭನ್ ಇರೋದು ಕರ್ನಾಟಕದಲ್ಲಿ ಒಂದು ಹೊಸ ಅಲೆ ಸೃಷ್ಠಿ ಮಾಲು ಹೊರಟಿದ್ದೇನೆ ಕರ್ನಟಕದಲ್ಲಿ ಆರ್ಭ ನ್ ಇರೋದು, ಮೂರು ಜನ ಜನರಲ್ ಮೆನೇಜರ್ ನಾಲ್ಕು ಐದು ರಾಜ್ಯ ಈ ವ್ಯಾಪ್ತಿಗೆ ಒಳಪಡುತ್ತದೆ ಇವರನ್ನು ಜೋತೆ ಮಾತನಾಡಿದ ಇತಿಹಾಸವೇ ಇಲ್ಲ ಕಳೆದ ಮೂರು ದಿನದ ಹಿಂದೆ ಈ ವ್ಯಾಪ್ತಿಗೆ ಒಳಪಡುವ ಎಲ್ಲಾ ರಾಜ್ಯದವರನ್ನು ಕೂರಿಸಿ ಮಾತನಾಡಿದ್ದೇನೆ. ಬೇರೆ ರಾಜ್ಯ ಸೇರಿದಂತೆ ಜನ್ಮ ಕೊಟ್ಟಂತ ಭೂಮಿ ಕರ್ನಾಟಕಕ್ಕೆ ನಾವು ಏನೇನು ಮಾಡಬೇಕೋ ಅದನ್ನ ರೈಲ್ವೆ ಹಾಗೂ ಜಲ ಎರಡರಲ್ಲೂ ಅಭಿವೃದ್ದಿ ಮಾಡ್ತೀನಿ ಎಂದು ತಿಳಿಸಿದರು.
ವಿಧಾನ ಸಭೆ ಚುನಾವಣೆಯ ಸೋಲು ಒಂದು:
ಶಾಸಕ ಚುಣಾವಣೆಯಲ್ಲಿ ಸೋಲನ್ನು ಅನಿಭವಿಸಿದ್ದು ಒಂದು ಪಾಠವೆಂಭಂತೆ ಇಂದು ಕೇಂದ್ರ ಮಂತ್ರಿಯಾಗಿದ್ದೇನೆ ಇದಕ್ಕೆ ಈ ಭಗವಂತನ ಆಶಿರ್ವಾದ ಹಾಗೂ ನಮ್ಮ ನಾಯಕರ ಶ್ರಮ ಎಂದು ನಾನು ನಂಭಿದ ನಾಯಕರೂ ಕೈ ಬಿಟ್ಟಿಲ್ಲ ಆ ಭಗವಂತನೂ ಕೈ ಬಿಟ್ಟಿಲ್ಲ ಮತಭಾಂದವರ ಮುಖಾಂತರ ನನಗೆ ಆಶಿರ್ವಾದ ಮಾಡಿದ್ದಾನೆ. ಇದರಿಂದಾಗಿ ನಮ್ಮ ರಾಜ್ಯಕ್ಕೆ ನಿಷ್ಠೆಯಿಂದ ಕೆಲವನ್ನು ನಿರ್ವಹಿಸುತ್ತೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು.