ನಕಾÀರಾತ್ಮಕ ವಿಚಾರಗಳನ್ನು ತೆಗೆದು ಹಾಕಿ ಸಕಾÀರಾತ್ಮಕವಾಗಿ ವಿಚಾರಿಸಿ ಒಳ್ಳೆಯ ಕೆಲಸ ನಿರ್ವಹಿಸಿ: ಸೇಡಂ
ಬಸವಕಲ್ಯಾಣ:ಜು.20: ಯುವಕರಿಂದ ಬಿಡಿಸಲಾಗದ ಸಮಸ್ಯೆಗಳನ್ನು ಹಿರಿಯರು ಸುಲಭವಾಗಿ ಬಗೆಹರಿಸುತ್ತಾರೆ. ಅವರ ಯೋಜನಾ ಕೌಶಲ್ಯ, ಉತ್ತಮ ದೃಷ್ಟಿ, ಸುೀರ್ಘ ಕೆಲಸದ ಅನುಭವವೇ ನಮಗೆ ಬೌದ್ಧಿಕ ಸಂಪತ್ತು ಎಂದು ಬಸವರಾಜ ಪಾಟೀಲ ಸೇಡಂ ಹೇಳಿದರು
ನಗರದ ಹರಳಯ್ಯ ಗವಿಯಲ್ಲಿ ಜರುಗಿದ ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಸಭೆ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರು ಮುಂದಿನ ಪೀಳಿಗೆಗ ಹೊಸ ಜೀವನ ಒದಗಿಸಬಹುದು. ಚಿಕ್ಕ- ಚಿಕ್ಕ ಸಮಸ್ಯೆಗಳನ್ನು ಬಗೆಹರಿಸಬಹುದು. ಅನುಭವ ತುಂಬಿದ ವ್ಯಕ್ತಿಯೇ ಹಿರಿಯ ನಾಗರಿಕ. ನಕರಾತ್ಮಕ ವಿಚಾರಗಳನ್ನು ತೆಗೆದು ಹಾಕಿ ಸಕರಾತ್ಮಕವಾಗಿ ವಿಚಾರಿಸಿ ಒಳ್ಳೆಯ ಕೆಲಸ ನಿರ್ವಹಿಸಿಬೇಕು. ಅನೇಕ ಅನಾಹುತಗಳನ್ನು ತಪ್ಪಿಸಿ ಈ ನಗರಕ್ಕೆ ಕಳಸ ಪ್ರಾಯವಾಗಿರುವಂತಹ ವಾತಾವರಣ ಸೃಷ್ಟಿಸಬಹುದು ಸಂಘೇ ಶಕ್ತಿ ಕಲಿಯುಗೇ ಎನ್ನುವುನ್ನು ನೆನಪಿಟ್ಟು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ಗೌರವಾಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಸಾನಿಧ್ಯ ವಹಿಸಿ ಮಾತನಾಡಿ, ಹಿರಿಯ ನಾಗರಿಕರು ಸಮಯವನ್ನು ವ್ಯರ್ಥ ಮಾಡದೇ ಸೇವಾ ಮನೋಭಾವ ಬೆಳೆಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರತಿದಿನ ಲಿಂಗಪೂಜೆ ಮಾಡಿಕೊಳ್ಳಬೇಕು. ಉಲ್ಲಾಸ ಹೊಂದಿರಬೇಕು ಪುಸ್ತಕ ಹಂಚಿ ಓದುವ ಅಭಿರುಚಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ನಿವೃತ್ತ ನ್ಯಾಯಾೀಶ ಸುಭಾಶ್ಚಂದ್ರ ನಾಗರಾಳೆ ಮಾತನಾಡಿ, ನಾವು ಸಮಾಜ ಮುಖಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಸಮಾಜದ ಹಾಗೂ ತಂದೆ-ತಾಯಿಯ ಋಣ ತೀರಿಸಬೇಕಾಗಿದೆ. ಶರೀರಕ್ಕೆ ವಯಸ್ಸಿದೆ ಆದರೆ ಮನಸ್ಸಿಗೆ ವಯಸ್ಸಿಲ್ಲ. ಸೇವೆ-ತ್ಯಾಗಗಳಿಗೆ ನಾವು ಮಹತ್ವ ಕೋಡಬೇಕಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪೂರೆ ಪ್ರಾಸ್ತಾವಿಕ ಮಾತನಾಡಿ, ಹಿರಿಯ ನಾಗರಿಕರು, ಅನಾರೋಗ್ಯ, ಹಣಕಾಸಿನ ತೊಂದರೆ, ಒಂಟಿತನದಿಂದ ಬಳಲುತ್ತಿದ್ದಾರೆ. ಅವರನ್ನು ಬೆಂಬಲಿಸಲು ಒಕ್ಕೂಟವು ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಬುರಾವ ಹಿರೇನಾಗಾಂವಕರ, ರಾಜಕುಮಾರ ಸಿರಗಾಪೂರೆ ಮಾತನಾಡಿದರು. ಸಂಘದ ಕೋಶಾಧ್ಯಕ್ಷ ಜಗನ್ನಾಥ ಕುಶನೂರೆ ಲೆಕ್ಕಪತ್ರದ ವಿವರಣೆ ವಾಚಿಸಿದರು. ಈ ವೇಳೆ ವೀರಣ್ಣಾ ಹಲಶೆಟ್ಟಿ, ಜಗನ್ನಾಥ ಖೂಬಾ, ರೇವಣಪ್ಪಾ ರಾಯವಾಡೆ ಶಿವರಾಜ ಶಾಶೆಟ್ಟಿ, ಬಸವರಾಜ ತೊಂಡಾರೆ, ಬಸವರಾಜ ಶೀಲವಂತ, ಮಲ್ಲಿಕಾರ್ಜುನ ಕುರಕೋಟೆ, ಲಕ್ಷ್ಮಿಬಾಯಿ ಪಾಟೀಲ, ವಿದ್ಯಾವತಿ ಶೇರಿಕಾರ, ಐ.ಎಸ್.ಪಂಚಾಳ, ಸಿದ್ಧಣ್ಣಾ ಪರಪಳೆ, ಸರಸ್ವತಿ ಬಿರಾದಾರ ಸೇರಿದಂತೆ ಇತರರಿದ್ದರು. ಕಾರ್ಯದರ್ಶಿ ಶಂಕರ ಕರಣೆ ಸ್ವಾಗತಿಸಿದರೆ, ಶ್ರೀಶೈಲ ಹುಡೇದ ನಿರೂಪಿಸಿದರು. ಭೀಮಾಶಂಕರ ಮಾಶಾಳಕರ ವಂದಿಸಿದರು.