ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾರಕ್ಕೆ ಒತ್ತಾಯ
ಬಸವಕಲ್ಯಾಣ: ಜು.20:ಮಕ್ಕಳ ಹಕ್ಕುಗಳ ಒಡಂಬಡಿಕೆ ಒಪ್ಪಿಕೊಂಡು 32 ವರ್ಷಗಳು ಕಳೆದರು ಸಹ ದೇಶದಲ್ಲಿ ಮಕ್ಕಳ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿದೆ. ದೇಶಕ್ಕೆ ಸ್ವತಂತ್ರ ಸಕ್ಕಿ 75 ವರ್ಷ ಕಳೆದರು ಬಡ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಮೂಲಭೂತ ಹಕ್ಕುಗಳು ಸಿಗುತ್ತಿಲ್ಲ ಎಂದು ಮಕ್ಕಳ ಹಕ್ಕುಗಳ ಗುಂಪುಗಳ ಒಕ್ಕೂಟ ವಿಷಾದ ವ್ಯಕ್ತಪಡಿಸಿತು.
ನಗರದ ಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಕ್ಕಳ ಹಕ್ಕುಗಳ ಗುಂಪುಗಳ ಒಕ್ಕೂಟದ ಪದಾಕಾರಿಗಳು ಮಾತನಾಡಿ, ಶಿಕ್ಷಣ ಸೇರಿದಂತೆ ಮಕ್ಕಳಿಗೆ ಪೂರಕವಾದ ಮಕ್ಕಳ ಭವಿಷ್ಯ ರೂಪಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರಗಳು ಗಮನ ಹರಿಸಲು ಮುಂದಾಗಬೇಕಲು ಎಂದು ಒತ್ತಾಯಿಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷೆ ಭವಾನಿ ರಾಜಕುಮಾರ ಅತಲಾಪೂರ ಮಾತನಾಡಿ, ಬಸವಕಲ್ಯಾಣ ತಾಲೂಕಿನ ಪರ್ತಾಪೂರ, ಅತಲಾಪೂರ, ಯರಂಡಿ, ಲಿಂಗದಳ್ಳಿ, ಯದಲಾಪೂರ ಸೇರಿದಂತೆ ಗ್ರಾಮೀಣ ಭಾಗದ ಹಲವು ಗ್ರಾಮಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಾಲೂಕಿನ ಹಲವು ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಕೆಲವೆಡೆ ಶಿಕ್ಷಕರಿದ್ದರೆ ಕೊಠಡಿಗಳಿಲ್ಲ ಹೀಗಾಗಿ ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಅಭ್ಯಾಸ ಮಾಡುವಂತಹ ಪರಿಸ್ಥಿ ನಿರ್ಮಾಣವಾಗಿದೆ.
ಮಕ್ಕಳಿಗೆ ಅಗತ್ಯ ವಿರುವ ಶೌಚಾಲಯ, ಕುಡಿಯುವ ನೀರು, ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಳಭೂತ ಸೌಕರ್ಯಗಳು ಇಲ್ಲದ ಕಾರಣ ಮಕ್ಕಳು ನಾನಾ ಸಮಸ್ಯೆಗಳು ಎದುರಿಸುವಂತಾಗಿದೆ. ಅಗತ್ಯ ಸೌಲಭ್ಯಗಳು ಸಿಗದೇ ಇರುವ ಕಾರಣ ಅದೆಷ್ಟೋ ವಿದ್ಯಾರ್ಥಿಗಳು ಶಾಲೆಯಿಂದ ದೂರು ಉಳಿಯುವಂತಾಗಿದೆ ಎಂದು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವ ಕಾರಣ ಸಾವಿರಾರು ವಿದ್ಯಾರ್ಥಿಗಳು ಅಕ್ಷರ ಕಲಿಯುವ ಹಂತದಲ್ಲಿ ಹೋಟೆಲ್, ಗ್ಯಾರೇಜ್ ಸೇರಿದಂತೆ ದುಡಿಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಟದ ಮೈದಾನ ಇಲ್ಲದ ಕಾರಣ ಕ್ರೀಡಾ ಚಟುವಟಿಕೆಯಿಂದ ದೂರು ಉಳಿಯುವಂತಾಗಿದೆ. ಹಾಗೂ ಶಾಲೆಗೆ ಸುತ್ತುಗೋಡೆ ನಿರ್ಮಿಸದ ಕಾರಣ ಶಾಲೆ ಬಿಟ್ಟ ನಂತರ ಕೆಲವಡೆ ಶಾಲೆಯಲ್ಲಿ ಪುಂಡರು ಮಧ್ಯ ಸೇವೆನೆ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು. ಹೀಗಾಗಿ ಇಂತಹ ಪುಂಡರ ವಿರುದ್ದ ಸಂಬಂತರು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣಕ್ಕೆ ಅಗತ್ಯವಿರುವ ಸಹಾಯ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಒತ್ತಾಯಿಒಸಿದರು. ಈ ವೇಳೆ ಒಕ್ಕೂಟದ ಪದಕಾರಿಗಳಾದ ಅನೀತಾ ಪ್ರಶಾಂತ ಹಂದ್ರಾಳ, ವಿಶಾಲ ಬಸವರಾಜ, ಸರಸ್ವತಿ ಬೇಟ ಬಾಲಕುಂದಾ, ಸುನಂದಾ ಯದಲಾಪೂರ, ರಾಧಾ ಪರಮೆಶ್ವರ ಮಾತನಾಡಿದರು.
ಈ ವೇಳೆ ಆರ್‍ಎಲ್‍ಎಚ್‍ಪಿ ನಿರ್ದೇಶಕಿ ಸರಸ್ವತಿ, ಯೋಜನಾ ಸಂಯೋಜಕ ನಾಗರಾಜ ಶೀಲವಂತ, ಜಿಲ್ಲಾ ಸಂಯೋಜಕಿ ಸ್ನೇಹಲತಾ ಮೇತ್ರೆ ಸೇರಿದಂತೆ ಆರ್‍ಎಲ್‍ಎಚ್‍ಪಿ ಸಿಬ್ಬಂದಿಗಳಾದ ನಟರಾಜ, ಸುನಂದಾ, ಪ್ರೀಯಂಕಾ, ಚಂದ್ರಕಲಾ ಸೇರಿದಂತೆ ಮತ್ತಿತರಿದ್ದರು.