ಗ್ಯಾರಂಟಿ ಯೋಜನೆಗಳ ಸಮಸ್ಯೆಗಳಿದ್ದರೆ ತ್ವರಿತವಾಗಿ ಬಗೆ ಹರಿಸಿ: ಕಾಮಣ್ಣಾ
ಬಸವಕಲ್ಯಾಣ: ಜು.20:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದು ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ಹುಲಸೂರ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷ ಸಿದ್ರಾಮ ಕಾಮಣ್ಣ ಅÀವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಅಕಾರಿಗಳು ಶ್ರಮ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಇಲಾಖೆಯಲ್ಲಿನ ತಾಂತ್ರಿಕ ದೋ?Àಗಳು ಹಾಗೂ ಯೋಜನೆಗೆ ಸಂಬಂಸಿದ ಇನ್ನಿತರ ಸಮಸ್ಯೆಗಳ ಕುರಿತು ದೂರುಗಳಿದ್ದರೆ ಸಮಿತಿಯ ಎಲ್ಲ ಸದಸ್ಯರು ಅಕಾರಗಳ ಗಮನಕ್ಕೆ ತಂದು ಅವುಗಳನ್ನು ತ್ವರಿತವಾಗಿ ಬಗೆಹರಿಸಿ ಜನರಿಗೆ ಸರಕಾರದ ಯೋಜನೆಗಳು ಮುಟ್ಟಿಸಲು ಅಕಾರಿಗಳು ಮುಂದಾಗಬೇಕು ಎಂದು ಗ್ಯಾರಂಟಿ ಯೋಜನೆಗಳ ಸಮಿತಿಯ ಹುಲಸೂರ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣಾ ಅವರು ಅಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನು?Á್ಠನ ತಾಲೂಕು ಸಮಿತಿಯ ಸದಸ್ಯರುಗಳಾದ ಸತೀಶ ಗಾಯಕವಾಡ, ತ್ರಿಬುಂಕ ಜವಾಯಿ, ವೆಂಕಟೇಶ ಗುತ್ತೆದಾರ, ಪ್ರಶಾಂತ ಪಾಟಿಲ, ವಿನಾಯಕ ಪವಾರ, ಗೌಸೋದಿನ್, ಈಶ್ವರ ಮೇತ್ರೆ, ಶಿವಕುಮಾರ ಕೂಳಿ, ಪ್ರೀತಮ ಜಾಧವ ಸೇರಿದಂತೆ ಸಿಡಿಪಿಓ ಗೌತಮ ಸಿಂಧೆ, ಬಸ್ ಘಟಕದ ವ್ಯವಸ್ಥಾಪಕ ಮೊಹಮ್ಮದ್ ನಯೀಮ್, ಜೆಸ್ಕಾಂ ಎಇಇ ಗಣಪತಿ ಮೈನಾಳೆ, ತಾ.ಪಂ. ಸಹಾಯಕ ನಿರ್ದೇಶಕ ಮಾಹದೇವ ಜಮ್ಮು ಸೇರಿದಂತೆ ಇತರೆ ಅಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.
ಗ್ರಹ ಲಕ್ಷ್ಮೀ, ಗ್ರಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಕುರಿತು ಆಯಾ ಇಲಾಖೆಯ ಅಕಾರಿಗಳು ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಶಿವಾನಂದ್ ಮೇತ್ರೆ, ತಾಪಂ ಇಓ ಮಹಾದೇವ ಎಸ್. ಬಾಬಳಗಿ ಉಪಸ್ಥಿತರಿದ್ದರು. ಗ್ಯಾರಂಟಿ ಸಮಿತಿಯ ನೂತನ ಅಧ್ಯಕ್ಷ ಸಿದ್ರಾಮ ಕಾಮಣ್ಣ ಹಾಗೂ ಸಮಿತಿಯ 14 ಸದಸ್ಯರಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು.