ಕನ್ನಡ ಸಾಹಿತ್ಯಕ್ಕೆ ವಿಸಾಜಿ ಅವರ ಕೊಡುಗೆ ಅಪಾರ :ಜಗನ್ನಾಥ ಹೆಬ್ಬಾಳೆ
ಬೀದರ:ಸೆ.28: ಕರ್ನಾಟಕ ಗಡಿ ಜಿಲ್ಲೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿನ ಸಿಬಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೆÇ್ರ. ಜಿ.ಬಿ. ವಿಸಾಜಿ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬ ಲಾರದ ಹಾನಿಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ ಪೆÇ್ರ. ಜಗನ್ನಾಥ ಹೆಬ್ಬಾಳೆ ಅವರು ಹೇಳಿದರು.
ಬೀದರನ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ಕರ್ನಾಟಕ ಸಾಹಿತ್ಯ ಸಂಘದಿಂದ ಬುಧವಾರ ಆಯೋಜಿಸಿದ ಹಿರಿಯ ಸಾಹಿತಿ ಪೆÇ್ರ. ಜಿ.ಬಿ. ವಿಸಾಜಿ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೆÇ್ರ. ಜಿ.ಬಿ. ವಿಸಾಜಿ ಅವರು ಈ ಭಾಗದ ಅನೇಕ ಉದಯೋನ್ಮುಖ ಬರಹಗಾರರಿಗೆ ಬೆಳಸಿದ್ದಾರೆ. ವೇದಿಕೆಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ. ಭಾಲ್ಕಿಯ ಹಿರೇಮಠ ಸಂಸ್ಥಾನದೊಂದಿಗೆ ಕನ್ನಡದ ಕರ್ಯಕ್ರಮಗಳನ್ನು ನಡೆಸಿದ್ದಾರೆ. ಶ್ರೀಮಠದ ಕರ್ಯಕ್ರಮಗಳಿಗೆ ಪೆÇ್ರ. ವಿಸಾಜಿ ಅವರ ಸೇವೆ ಕಡ್ಡಾಯವಾಗಿರುತ್ತಿತ್ತು.
ಸುಮಾರು 30ಕ್ಕೂ ಹೆಚ್ಚು ಕನ್ನಡ ಮೌಲಿಕ ಕೃತಿಗಳನ್ನು ಹೊರತಂದಿದ್ದರು. ಅವರ ಬದುಕು ಬಸವಮಯಾಗಿತ್ತು. ವಚನ ಸಂಸ್ಕೃತಿಯೇ ಅವರ ಉಸಿರಾಗಿತ್ತು. ಅಪಾರ ಶಿಷ್ಯ ಬಳಗ ಹೊಂದಿದ್ದಾರೆ. 20ಕ್ಕೂ ಹೆಚ್ಚು ವರ್ಷಗಳ ಕಾಲ ಭಾಲ್ಕಿ ತಾಲೂಕಿನ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಆ ಪತ್ರಿಕೆ ಮೂಲಕ ಸಾಹಿತಿ ಕಲಾವಿದರನ್ನು ಪರಿಚಯಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಪಾಠ ಪ್ರವಚನ ಅತಿ ಗಂಭೀರತೆಯಿಂದ ಮಾಡುತ್ತಿದ್ದರು. ಬೀದರನ ಕರ್ನಾಟಕ ಕಾಲೇಜಿನ ಎಂ.ಎ. ಕನ್ನಡ ತರಗತಿಗಳ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದು ಇನ್ನೂ ಹಿರಿಯ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪೆÇ್ರ. ವಿಸಾಜಿ ಅವರು ನಮಗೆಲ್ಲ ಮಾದರಿ ಪ್ರಾಧ್ಯಾಪಕರೇ ಆಗಿದ್ದರೆಂದು ಪೆÇ್ರ. ಜಗನ್ನಾಥ ಹೆಬ್ಬಾಳೆ ಅಭಿಪ್ರಾಯಪಟ್ಟರು.
ಈ ನುಡಿನಮನ ಕರ್ಯಕ್ರಮದಲ್ಲಿ ಪೆÇ್ರ. ದೇವಿದಾಸ ತುಮಕುಂಟೆ, ಪೆÇ್ರ. ಎಸ್.ಬಿ. ಬಿರಾದಾರ, ಶಂಕರೆಪ್ಪ ಹೊನ್ನಾ, ಡಾ. ರಾಜಕುಮಾರ ಹೆಬ್ಬಾಳೆ, ಡಾ. ಸುರೇಖಾ ಬಿರಾದಾರ, ಎಸ್.ಬಿ. ಕುಚಬಾಳ, ಡಾ. ಸುನಿತಾ ಕೂಡ್ಲಿಕರ್, ನಾಟಕ ಕಂಪನಿ ಮಾಲಿಕರಾದ ಶ್ರೀ ಬಸವರಾಜ ಮುಂತಾದವರು ಪೆÇ್ರ. ವಿಸಾಜಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ವೀರಶೆಟ್ಟಿ ಮಣಗೆ, ಜಗನ್ನಾಥ ಪಾರಾ, ವೈಜಿನಾಥ ರಾಗಾ ಶಿವಶರಣಪ್ಪ ಗಣೇಶಪೂರ, ಡಾ. ಸಾವಿತ್ರಿ ಹೆಬ್ಬಾಳೆ, ಪ್ರಕಾಶ ಕನ್ನಾಳೆ, ಶಿವರಾಜ ಮುದ್ದಾ, ಬಸವರಾಜ ಚಿಮಕೋಡೆ, ಉಮೇಶ ಮಾನಶೆಟ್ಟಿ, ಶಿವಕುಮಾರ ಕಮಠಾಣೆ, ಡಾ. ವಿಶಾಲ ಹೆಬ್ಬಾಳೆ, ಶಿವಾನಂದ ಗುಂದಗಿ, ಡಾ. ಸಂಜೀವಕುಮಾರ ಜುಮ್ಮಾ, ಡಾ. ಅಶೋಕ ಕೋರೆ, ಜನಧ್ವನಿ ಪತ್ರಿಕೆ ಸಂಪಾದಕರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಡಾ. ಸಂಜೀವಕುಮಾರ ತಾಂದಳೆ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.