ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಕಾಪಾಡಿ : ರವೀಂದ್ರರಡ್ಡಿ ಮಾಲಿಪಾಟೀಲ್
ಹುಮನಾಬಾದ್ : ಸೆ.28:ತಾಲೂಕಿನ ವ್ಯಾಪ್ತಿಯ ಎಲ್ಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರ ಚುನಾವಣೆ ಅಂತಿಮ ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರಡ್ಡಿ ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಗುರುಭವನದ ಸಭಾಂಗಣದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡದೇ ಹೋದಲ್ಲಿ ಎಲ್ಲ ಇಲಾಖೆಯ ಸರಕಾರಿ ನೌಕರರು ಒಗ್ಗೂಡಿ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ್ ಮಾತನಾಡಿ, ಹುಮನಾಬಾದ್ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗಶಟ್ಟಿ ಡುಮಣಿ ತಾನಾಶಾಯಿಯಂತೆ ವರ್ತಿಸುತ್ತಿದ್ದಾರೆ. ಇವರ ಈ ನಡೆಗೆ ಕಡಿವಾಣ ಹಾಕಲು ಎಲ್ಲರೂ ಒಂದಾಗಬೇಕು. ಮತ್ತು ಚುನಾವಣೆ ನ್ಯಾಯಯುತವಾಗಿ ನಡೆಯಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಮುರಗೇಂದ್ರ ಸಜ್ಜನಶಟ್ಟಿ ಮಾತನಾಡಿ, ಸರಕಾರಿ ನೌಕರರ ಸಂಘದ ಇಗೀನ ಅಧ್ಯಕ್ಷ ನಾಗಶಟ್ಟಿ ಡುಮಣಿ ಅವರು ಅಸಂವಿಧಾನಿಕ ಪದಗಳನ್ನು ಬಳಕೆ ಮಾಡುವ ಮೂಲಕ ಬಹುತೇಕರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಟಿಎ??? ಡಾ. ಶಿವಕುಮರ ಸಿದ್ದೇಶ್ವರ, ಶಿವಕುಮಾರ, ವಿಜಯಕುಮಾರ, ಮಲ್ಲಿಕಾರ್ಜುನ್, ಡಾ. ಶಾಂತಕುಮಾರ, ರಾಜಪ್ಪ ಸಿಂದೋಲ್, ಗ್ಯಾನಪ್ಪ, ಜೈರಾಜ, ರವಿಕಾಂತ, ಮಹಾದೇವ, ಜಯರಾಜ, ಶ್ಯಾಮಲಾಬಾಯಿ, ಕವನಶ್ರೀ, ಭಾಗ್ಯಶ್ರೀ, ಸುಹಾಸಿನಿ ಸೇರಿ ಅನೇಕರಿದ್ದರು.