ಜಿಎನ್‍ಡಿ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ ಅಂತ್ಯ
ಬೀದರ :ಸೆ.28: ನಗರದ ಮೈಲೂರ ರಸ್ತೆಯಲ್ಲಿರುವ ಗುರು ನಾನಕ ದೇವ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎರಡು ದಿವಸದ ಸುಸ್ಥಿರ ಮೂಲಸೌಕರ್ಯ ಮತ್ತು ನವೀನತೆ ಕುರಿತು ರಾಷ್ಟ್ರೀಯ ಸಮ್ಮೇಳನ ಜರುಗಿತು.
ಮುಖ್ಯ ಅತಿಥಿಯಾಗಿ ಡಾ.ಜಗದೀಶ್ ವೆಂಗಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮುಂದು ವರೆದು ಮಾತನಾಡುತ್ತ ಕಬ್ಬಿಣದ ಸಾಮಾಗ್ರಿಯನ್ನು ಕಡಿಮೆ ಉಪಯೋಗಿಸಿ ಬಿದುರು (ಬ್ಯಾಂಬು) ಸಾಮಾಗ್ರಿ ಹೆಚ್ಚಾಗಿ ಉಪಯೋಗ ಮಾಡಿಕೊಳ್ಳುವಂತೆ ಕರೆಕೊಟ್ಟರು. ಬಿದುರು ಉಪಯೋಗದಿಂದ ಕಾಂಕ್ರೇಟ್‍ನ ಗುಣಮಟ್ಟ ಮತ್ತು ಜೀವಿತಾವಧಿ ಹೆಚ್ಚಾಗುತ್ತದೆ ಎಂದು ನುಡಿದರು.
ಈ ಸಮ್ಮೇಳನದಲ್ಲಿ ಭಾರತದ ವಿವಿಧ ಸಂಶೋಧನಾ ಕೇಂದ್ರದಿಂದ 75ಕ್ಕಿಂತ ಹೆಚ್ಚು ಗೌರವಾನ್ವಿತ ವಿದ್ವಾಂಸರು ಮತ್ತು ಸಂಶೋಧನಕಾರರು, ಉದ್ಯಮ ತಜ್ಞರು ಸಂಶೋಧನಾ ಲೇಖನಗದೊಂದಿಗೆ ಪ್ರಸ್ಥುತಿ ಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದರು. ವಿವಿಧ ಪರ್ಯಾಯ ಕಟ್ಟ ಸಾಮಗ್ರಿಗಳ ಪ್ರದರ್ಶನವನು ಪ್ರದರ್ಶಿಸಿ ಪ್ರೇಕ್ಷಕರ ಗಮನವನ್ನು ಸೆಳೆದರು.
ಈ ಸಂದರ್ಭದಲ್ಲಿ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್‍ನ ಅಧ್ಯಕ್ಷರು ಡಾ.ಎಸ್.ಬಲಬೀರ ಸಿಂಗ್, ಉಪಾಧ್ಯಕ್ಷೆ
ಡಾ.ರೇಷ್ಮಾ ಕೌರ, ಪ್ರಾಂಶುಪಾಲ ಡಾ.ಸುರೇಶ ಆರ್. ರಡ್ಡಿ, ಧನಂಜಯ ಎಮ್. ಉಮಾ ಶಂಕರ ವೈ, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.