ಕರಕಿಹಳ್ಳಿ ಗ್ರಾಪಂ: ನಕಲಿ ಕ್ರಿಯಾ ಯೋಜನೆ ಮಾಡಿ ಲಕ್ಷಾಂತರ ಹಣ ಲೂಟಿ ಆರೋಪ
ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿ:ಜು.20:ತಾಲೂಕಿನ ಕರಕಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಕಲಿ ಕ್ರಿಯಾ ಯೋಜನೆ ಮಾಡಿ ಲಕ್ಷಾಂತರ ಹಣ ಲೂಟಿ ಮಾಡಲಾಗಿದೆ ಎಂದು ವರವಿ ಗ್ರಾಮದ ರಾಜು ಪೂಜಾರಿ ಆರೋಪಿಸಿದ್ದಾರೆ.
ಯಡ್ರಾಮಿ ತಾಲೂಕಿನ ಹೊಸ ಪಂಚಾಯತಿಯಾಗಿ ಪ್ರಾರಂಭದಿಂದ ಒಂದು ಇಲ್ಲಾ ಒಂದು ಸುದ್ದಿಯಲ್ಲಿ ಇರುವ ಕರಕಿಹಳ್ಳಿ ಪಂಚಾಯತಿ ಈಗ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವಾರು ನಕಲಿ ದಾಖಲೆ ನಿರ್ಮಾಣ ಮಾಡಿ ಲಕ್ಷಾಂತರ ಹಣ ಲೂಟಿ ಮಾಡಲಾಗಿದ್ದು.
ಕ್ರಿಯಾ ಯೋಜನೆಯ ಮೂಲ ಪ್ರತಿಯನ್ನು ತಿದ್ದುಪಡಿ ಮಾಡಿ ಸೈದಾಪೂರ ಗ್ರಾಮದಲ್ಲಿ 16.50 ಲಕ್ಷ ಹಾಗೂ ವರವಿ ಗ್ರಾಮದಲ್ಲ11.50 ಲಕ್ಷದ ಕಾಮಗಾರಿ ಮಾಡಿ ಬೊಗಸ್ ಬಿಲ್ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.
ಈ ವಿಷಯವಾಗಿ ಹಲವಾರು ಬಾರಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅವರ ಘಮನಕ್ಕೆ ತಂದರೂ ಕೂಡ ಕ್ರಮ ಮಾತ್ರ ಇಲ್ಲ ಎಂದು ಆಡಳಿತದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಸುಳ್ಳು ದಾಖಲೆ ಮಾಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಭಂದ ಪಟ್ಟ ಕಾರ್ಯನಿರ್ವಾಹಕ ಅಧಿಕಾರಿ ಜಇ ವಿರುದ್ಧ ಹಾಗೂ ಪಂಚಾಯತಿ ಅಧ್ಯಕ್ಷರ ವಿರುದ್ಧ ಸುಕ್ತ ತನಿಖೆ ಮಾಡಿ ಕಾನೂನು ಕ್ರಮ ಜರುಗಿಯಬೇಕು ಎಂದು ಪತ್ರಿಕೆ ಮೂಲಕ ತಿಳಿಸಿದ್ದಾರೆ.
ಹೀಗೆ ಮುಂದುವರಿದರೆ ನಮ್ಮ ಹಸಿರು ಸೇನೆ ಬಿಸಿಲು ನಾಡಿನ ಸಂಘಟನೆ ವತಿಯಿಂದ ಗ್ರಾಮ ಪಂಚಾಯತಿಗೆ ಬಿಗ್ ಹಾಕಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕು ಪಂಚಾಯತಿಗೆ ಹೊಸದಾಗಿ ಇರುವುದರಿಂದ ಸೂಕ್ತ ದಾಖಲೆಗಳು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು.
ಕ್ರೀಯಾ ಯೋಜನೆ ನಕಲಿ ಆಗಿದ್ದು ನನ್ನ ಅವಧಿಯಲ್ಲಿ ಅಲ್ಲ.ಬೇರೆಯವರ ಅವಧಿಯಲ್ಲಿ.
ಪ್ರಸನ್ನ ಕುಮಾರ ಕರಕಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ.
ಕರಕಿಹಳ್ಳಿ ಹೊಸ ಪಂಚಾಯತಿ ಆದ ಮೇಲೆ ಹಿಂದೆ ಕೂಡ ಸೌಚಾಲಯ ಹಗರಣ ಆಗಿತ್ತು ಇಂದು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಕಲು ಮಾಡಿ ಲಕ್ಷಾಂತರ ಹಣ ಲೂಟಿ ಮಾಡಲಾಗಿದೆ.ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು.
ಶಪೀ ಉಲ್ಲಾ ದಖನಿ ಬಿಸಿಲು ನಾಡಿನ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷರು ಯಡ್ರಾಮಿ.