ವಾಂತಿ ಭೇದಿ ಹಿನ್ನಲೆ 16 ಜನ ಅಸ್ವಸ್ಥ
ಸಂಜೆವಾಣಿ ವಾರ್ತೆ
ಕೆಂಭಾವಿ:ಜು.20:ಜಿಲ್ಲೆಯಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಘಟನೆ ಮಾಸುವ ಮುನ್ನವೆ ಕೆಂಭಾವಿ ಪಟ್ಟಣ ಸಮೀಪದ ಮುದನೂರ ಗ್ರಾಮದ ಜನತಾ ಕಾಲೋನಿಯಲ್ಲಿ ಇಂತಹದೇ ಪ್ರಕರಣ ಶುಕ್ರವಾರ ನಡೆದಿದೆ ವಾಂತಿ ಭೇದಿಯಿಂದ ಸುಮಾರು 16ಜನ ಕೆಂಭಾವಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ.ಡಿ ಎಚ್ ಓ ಡಾ.ಪ್ರಭುಲಿಂಗ ಮಾನಕರ್,ಸುರಪುರ ತಾಲೂಕಾ ಆರೋಗ್ಯಧಿಕಾರಿ ಆರ್ ವಿ ನಾಯಕ ಸೇರಿದಂತೆ ಸುರುಪುರ.ಹುಣಸಗಿ ಮತ್ತು ಕೆಂಭಾವಿಯ ಆರೋಗ್ಯ ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದರು.ಸುರಪುರ ತಹಸೀಲ್ದಾರ ವಿಜಯಕುಮಾರ.ಹುಣಸಗಿ ತಹಸೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ,ಇಒ ಬಸವರಾಜ ಸ್ವಾಮಿ,ವೈದ್ಯಾಧಿಕಾರಿಗಳಾದ ಡಾ.ಗಿರೀಶ ಕುಲಕರ್ಣಿ, ಡಾ.ಸಿದ್ದು ನ್ಯಾಮಗೊಂಡ,ಡಾ.ಪ್ರಿಯಾಂಕ ಪಾಟೀಲಸೇರಿದಂತೆ ಸುರಪುರ ಶಾಸಕರ ಸಹೋದರರಾದ ಸುಶಾಂತ ನಾಯಕ ಮತ್ತುಮುದನೂರಿನ ಯುವ ಮುಖಂಡರಾದ ಕೃಷ್ಣರೆಡ್ಡಿ ಅಸ್ವಸ್ಥರ ಆರೋಗ್ಯ ಯೋಗಕ್ಷೇಮ ವಿಚಾರಿಸಿದರು.
ಘಟನೆಯ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ನೀರನ್ನು ತಪಸಾಣೆಗಾಗಿ ಕಳುಹಿಸಲಾಗಿದೆ ವರದಿ ಬಂದ ನಂತರ ಮೂಲಕಾರಣ ತಿಳಿದು ಬರುವುದು ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಶಹಪೂರ ಆಸ್ಪತ್ರೆಗೆ ಕಳುಹಿಸಲಾಗಿದೆ.
ಡಾ.ಆರ್ ವಿ ನಾಯಕ.
ಟಿ ಎಚ್ ಒ ಸುರಪುರ