ರಮಣೀಯವಾಗಿ ಕಾಣುತ್ತಿರುವ ಆಲಮಟ್ಟಿ ಆಣೆಕಟ್ಟೆ
ವಿಜಯಪುರ:ಜು.19:ಆಲಮಟ್ಟಿ ಅಣೆಕಟ್ಟೆಗೆ ಒಳ ಹರಿವು ದಿನೇ ದಿನೇ ಹೆಚ್ಚುತ್ತಿದ್ದು, ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಸದ್ಯಕ್ಕೆ 40,000ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ನೀರಿನ ಪ್ರಮಾಣ ಅಧಿಕವಾಗಿ ಅಣೆಕಟ್ಟೆ ಭರ್ತಿಯಾಗಿ ರಮಣೀಯವಾಗಿ ಕಾಣುತ್ತಿದೆ. ಅಣೆಕಟ್ಟೆಯಿಂದ 14 ಗೇಟ್ ಗಳನ್ನು ತೆರೆದು 65,000 ಕ್ಯೂಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ನದಿ ದಂಡೆ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ತಿಳಿಸಿದ್ದಾರೆ.