ಜಲ ಶಕ್ತಿ ಅಭಿಯಾನ-2024:ಯಶಸ್ವಿಯಾಗಿ ಜರುಗಿದ (ನಾರಿ ಶಕ್ತಿ ಸೆ ಜಲ ಶಕ್ತಿ) ಪ್ರಗತಿ/ಸಲಹೆ ಸಭೆ
ಕಲಬುರಗಿ:ಜು.19:ಜಲ ಶಕ್ತಿ ಅಭಿಯಾನ-2024 (ನಾರಿ ಶಕ್ತಿ ಸೆ ಜಲ ಶಕ್ತಿ) ಪ್ರಗತಿ/ಸಲಹೆ ಸಭೆಯು ನವದೆಹಲಿಯ ರಕ್ಷಣಾ ಸಚಿವಾಲಯದ ನಿರ್ದೇಶಕಿ ಸರ್ಮಿμÁ್ಠ ಮೈತ್ರಾ ಇವರ ನೇತೃತ್ವದಲ್ಲಿ ಕಲಬುರಗಿ ನೂತನ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಗುರುವಾರ ಜರುಗಿತು.
ಸಭೆಯಲ್ಲಿ ಎಂಜಿಎನ್‍ಆರ್‍ಇಜಿಎ ಯೋಜನೆಯ ಕಾಮಗಾರಿಗಳ ಚರ್ಚೆಯೊಂದಿಗೆ ಸಭೆ ಪ್ರಾರಂಭವಾಗಿ, ಇದರಲ್ಲಿ ವಿವಿಧ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾರ್ಯಗಳಾದ ಕೆರೆ/ನಾಲಾ/ಗೋಕಟ್ಟಾ ಹೂಳೆತ್ತುವ ಕೆಲಸಗಳು, ಚೆಕ್ ಡ್ಯಾಮ್‍ಗಳು, ಟ್ರೆಂಚ್ ಕಮ್ ಬಂಡಿಂಗ್, ಸೋಕ್‍ಪಿಟ್‍ಗಳು, ಫಾರ್ಮ್ ಪೂಂಡಗಳು, ಅಮೃತ ಸರೋವರ, ಕಲ್ಯಾಣಿ ಪುನರುಜ್ಜೀವನ ಮತ್ತಿತರ ವಿಷಯಗಳ ಕುರಿತು ವಿವರಿಸಲಾಯಿತು.
ಸಭೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಎಂಜಿಎನ್‍ಆರ್‍ಇಜಿಎ ಯೋಜನೆಯಡಿ ಮಹಿಳಾ ಕೂಲಿಕಾರ್ಮಿಕರ ಭಾಗವಹಿಸುವಿಕೆ ಜಿಲ್ಲೆಯಲ್ಲಿ ಶೇ. 56.83 ಇರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾತನಾಡಿ, ಎಂಜಿಎನ್‍ಆರ್‍ಇಜಿಎ ಯೋಜನೆಯಡಿ ಕಂದಕ ಬದು ನಿರ್ಮಿಸಿರುವ ಕುರಿತು ಹಾಗೂ ಅದರ ವೈಜ್ಞಾನಿಕ ಮಹತ್ವದ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆಯು ವಿವಿಧ ಜಲ ಸಂರಕ್ಷಣಾ ಕಾರ್ಯಗಳಾದ ಬದು ನಿರ್ಮಾಣ, ಕೃಷಿ ಹೊಂಡಗಳು, ಹನಿ ನೀರಾವರಿ ಕಾಮಗಾರಿಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ಪ್ರಯೋಜನಕಾರಿಯಾದ ಕಾಮಗಾರಿಗಳು ಕುರಿತು ವಿವರಣೆ ನೀಡಿದರು.
ತೋಟಗಾರಿಕೆ ಇಲಾಖೆಯ ಬಾಳೆ, ಪೇರಲ, ದ್ರಾಕ್ಷಿ, ಪಪ್ಪಾಯಿ ಮುಂತಾದ ಹಣ್ಣಿನ ತೋಟಗಳೊಂದಿಗೆ ಪ್ರದೇಶ ವಿಸ್ತರಣೆ ಕುರಿತು ಕಲಬುರಗಿ ತೋಟಗಾರಿಕೆ ಉಪನಿರ್ದೇಶಕರು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯು ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್ ಮತ್ತು ಎಸ್‍ಎಂಸಿ ಕಾಮಗಾರಿಗಳಾದ ಟ್ರೆಂಚ್ ಕಮ್ ಬಂಡಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಿಂದ ಮಣ್ಣಿನ ತೇವಾಂಶವನ್ನು ಹೆಚ್ಚಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ ಅವರು, ಕೆರೆ ಮತ್ತು ಕಲ್ಯಾಣಿಗಳಂತಹ ಸಾಂಪ್ರದಾಯಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವತ್ತ ಗಮನಹರಿಸಲಾಗಿದ್ದು, ನಗರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿ ನೆಡುತೋಪು ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಬೆಂಗಳೂರು ಸಿಜಿಡಬ್ಲ್ಯೂಬಿ (CGWB) ವಿಜ್ಞಾನಿ ಶಕ್ತಿವೇಲ್, ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಲಕ್ಷ್ಮಣ ಶೃಂಗೇರಿ ಹಾಗೂ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು