ಸಂಗೀತ ವಿದ್ಯೆ ಶ್ರೇಷ್ಠ: ಚಿಕ್ಕಮಠ
ಕಲಬುರಗಿ,ಜು.19-ಸಂಗೀತ ವಿದ್ಯೆ ಶ್ರೇಷ್ಠವಾದದ್ದು ಎಂದು ಕಾರತಿರಯ್ಯ ಚಿಕ್ಕಮಠ ಹೇಳಿದರು.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೋಳಾ ಗ್ರಾಮದ ವಿಠಲ ರುಕ್ಮಿಣಿ ದೇವಸ್ಥಾನ ಆವರಣದಲ್ಲಿ ಏಕಲೂರದ ನಾದ ಲೋಕ ಕಲಾ ಸಂಸ್ಥೆ ವತಿಯಿಂದ ನಡೆದ ಸಂಗೀತ ಸಂಜೆ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೂರ್ಯಕಾಂತ ಶಾಸ್ತ್ರಿಗಳು ಮಾತನಾಡಿ, ಸಂಗೀತ ಎಂತಹ ಮನಸ್ಸುಗಳನ್ನು ಸಹ ತಲುಪಲಿದ್ದು, ಎಂತಹ ಬೇಸರ, ಕಷ್ಟಕರ ಸಮಯದಲ್ಲಿದ್ದರೂ ಸಹ ಒಂದು ಕ್ಷಣ ಸಂಗೀತವನ್ನು ಆಲಿಸಿದರೆ ಮನಸ್ಸು ತನ್ನೆಲ್ಲಾ ದುಃಖಗಳನ್ನು ಕಳೆದುಕೊಂಡು ಸಮಾಧಾನ ಹೊಂದುತ್ತದೆ. ಭಾರತ ಋಷಿಮುನಿಗಳ, ಸಂತರ ನೆಲೆವೀಡು. ಜಗತ್ತಿಗೆ ಭಾರತ ಎರಡು ರೀತಿಯ ಕೊಡುಗೆ ನೀಡಿದೆ. ಒಂದು ಶಾಸ್ತ್ರ, ವೇದಾಂತಗಳ ದರ್ಶನ. ಮತ್ತೊಂದು ಸಂಗೀತ ಹಾಗೂ ಇತರ ಕಲೆಗಳು. ಎರಡು ಬೇರೆ ಬೇರೆಯಾದರೂ ಇವೆರಡು ಬಿತ್ತುವ ಸಂದೇಶ ಅಧ್ಯಾತ್ಮ. ಅಧ್ಮಾತ್ಮದೊಂದಿಗೆ ಮನರಂಜನೆ, ಆನಂದ ದೊರಕುತ್ತದೆ. ಭಾರತದ ಸಂಗೀತ ಮೋದಕ. ಪಾಶ್ಚಾತ್ಯ ಸಂಗೀತ ಮಾರಕ. ಭಾರತದ ಸಂಗೀತ ವಿಕಾಸದ ಹಾದಿ ತೋರಿದರೆ, ಪಾಶ್ಚಾತ್ಯ ಸಂಗೀತ ವಿಕಾರದ ದಾರಿ ತೋರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ನಾಗರೆಡ್ಡಿ, ಈಶ್ವರಾ ಜರಾರೆಡ್ಡಿ, ಮಲ್ಲಪ್ಪ ಸೀತಳಗೇರಿ, ನರಸಾರೆಡ್ಡಿ ಮಹೇಶರಾವ ಪಾಟೀಲ, ಕಿಶನರಾವ ಪಾಟೀಲ ಭಾಗವಹಿಸಿದ್ದರು. ನಂತರ ಸಂಗೀತ ಸುನಾದ ಕಾರ್ಯಕ್ರಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಹಣಮಂತರಾವ ಮಳ್ಳಿ , ನೀಲಯ್ಯ ಹೆಬ್ಬಳ್ಳಿ , ಸೂರ್ಯಕಾಂತ ಶಾಸ್ತ್ರಿ, ಪವಿತ್ರಾ ವಿಶ್ವನಾಥ, ಕಾಶಿನಾಥ ಯಂಗಟಿ, ಬೋದಯ್ಯ ಹಿರೇಮಠ, ರೇಣುಕಾ ಪ್ರವೀಣಕುಮಾರ, ಸವಿತಾ ವಿ. ಎಸ್., ಓಂಕಾರ ಸ್ವಾಮಿ ರಾಜೋಳ, ಷಡಕ್ಷರಿ ಹಿರೇಮಠ, ರಾಮಚಂದ್ರ ಕಲ್ಲಹಿಪ್ಪರಗಿ, ವೀರಭದ್ರಯ್ಯ ಸ್ಥಾವರಮಠ, ಮೃತ್ಯುಂಜಯ ಚಿಕ್ಕಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.