ವಿಷ ಸೇವಿಸಿ ಯುವಕ ಸಾವು
ಕಲಬುರಗಿ,ಜು.19-ವಿಷ ಸೇವಿಸಿ ಯುವಕನೊಬ್ಬ ಮೃತಪಟ್ಟ ಘಟನೆ ಸೈಯದ್ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ.
ಗೌತಮ ಅಂಬಾರಾಯ ಬೈನೂರ್ (25) ಮೃತಪಟ್ಟ ಯುವಕ.
ಆಟೋ ಚಾಲಕನಾಗಿದ್ದ ಗೌತಮ್ ಜೀವನದಲ್ಲಿ ಜಿಗುಪ್ಸೆಗೊಂಡು ನಂದೂರ ಹತ್ತಿರವಿರುವ ಧಾಬಾ ಬಳಿ ವಿಷ ಸೇವಿಸಿದ್ದ ಎನ್ನಲಾಗಿದ್ದು, ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.