ಭೂಪಾಲತೆಗನೂರ: ಹಾವು ಕಚ್ಚಿ ಯುವಕ ಸಾವು
ಕಲಬುರಗಿ,ಜು.19-ಕಬ್ಬಿನ ಹೊಲದಲ್ಲಿ ಹುಲ್ಲು ತೆಗೆಯುತ್ತಿದ್ದ ವೇಳೆ ಹಾವು ಕಚ್ಚಿ ಯುವಕನೊಬ್ಬ ಮೃತಪಟ್ಟ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಭೂಪಾಲತೆಗನೂರ ಗ್ರಾಮದಲ್ಲಿ ನಡೆದಿದೆ.
ರಾಜು ಅಲಿಯಾಸ್ ರಾಜಕುಮಾರ ಸಾಯಿಬಣ್ಣ ಜಮಾದಾರ (29) ಮೃತಪಟ್ಟ ಯುವಕ.
ಹಾಗರಗಾ ಸೀಮಾಂತರದಲ್ಲಿರುವ ಕಬ್ಬಿನ ಹೊಲದಲ್ಲಿ ಸಹೋದರ ಜಗದೇವ ಜೊತೆಗೂಡಿ ಹುಲ್ಲು ತೆಗೆಯುತ್ತಿದ್ದಾಗ ರಾಜಕುಮಾರಗೆ ಹಾವು ಕಚ್ಚಿತ್ತು. ಗ್ರಾಮದಲ್ಲಿ ಔಷಧಿ ಕೊಡಿಸಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.