ಜೂಜಾಟ: 9 ಜನರ ಬಂಧನ
ಕಲಬುರಗಿ,ಜು.19-ನಗರದ ಅಂಬೇಡ್ಕರ್ ಆಶ್ರಯ ಕಾಲೋನಿಯ ಸಮುದಾಯ ಭವನದ ಹಿಂದುಗಡೆ ಇರುವ ಖುಲ್ಲಾ ಜಾಗದಲ್ಲಿ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ಶಿವಾನಂದ, ಸಂಜೀವಕುಮಾರ, ಸುರೇಶ, ರಾಜಕುಮಾರ, ಸೈಯದ್ ತೌಸಿಫ್, ಫಿರೋಜ್ ಅವರು ದಾಳಿ ನಡೆಸಿ 9 ಜನರನ್ನು ಬಂಧಿಸಿ 7,140 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಭರತ್ ಮಾದಸಕರ, ಅಶೋಕ ಮೇಲಿನಕೇರಿ, ದಿಗಂಬರ ವಾಡೇಕರ್, ದಶರಥ ಮಾಲಗೊಂಡ, ಮಹಾಂತೇಶ ಜಮಾದಾರ, ಅಜಯ ಶೆಟ್ಟಿ, ಗುರುಮಿತ್ ಸಿಂಗ್, ಅಬ್ದುಲ್ ಕರೀಮ್, ಅಹ್ಮದ್ ಅಲಿ ಎಂಬುವವರನ್ನು ಬಂಧಿಸಲಾಗಿದೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.