ವಾಡಿ ಪುರಸಭೆ: ಚುನಾಯಿತ ಸದಸ್ಯರ ಅವಧಿ ಮುಗಿದು ಎರಡು ವರ್ಷವಾದರೂ ಘೋಷಣೆಯಾಗದ ಚುನಾವಣೆ
ವಾಡಿ,ಜು.19-ವಾಡಿ ಪುರಸಭೆಯ ಚುನಾಯಿತ ಸದಸ್ಯರುಗಳ ಅವಧಿ ಮುಗಿದು ಸುಮಾರು ಎರಡು ವರ್ಷಗಳಾದರೂ ಇನ್ನೂ ಚುನಾವಣೆ ಘೋಷಣೆ ಯಾಗಿಲ್ಲ. ಇದರಿಂದಾಗಿ ಪಟ್ಟಣದ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಇಲ್ಲಿನ ಜನರು ಅಶುದ್ಧ ನೀರು, ಅಸಮರ್ಪಕ ರಸ್ತೆ, ಅವೈಜ್ಞಾನಿಕ ಚರಂಡಿ, ಬಿದಿ ನಾಯಿಗಳ ಹಂದಿಗಳ ಕಾಟ, ನೈರ್ಮಲ್ಯದಿಂದ ಕೂಡಿದ ವಾತವರಣದಲ್ಲಿ ಜೀವನ ನಡೆಸಬೇಕಾದ ದುಸ್ಥಿತಿ ಬಂದಿದೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳು ಮತ್ತು ಸೇಡಂ ಉಪ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ತಕ್ಷಣವೇ ಪುರಸಭೆ ಚುನಾವಣೆ ಘೋಷಣೆಯಾಗಬೇಕಾಗಿದೆ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಆಗ್ರಹಿಸಿದ್ದಾರೆ.