ನೀರು ಕುದಿಸಿ ಆರಿಸಿ ಕುಡಿಯಲು ಮನವಿ
ಕೊಲ್ಹಾರ:ಜು.19: ಕೃಷ್ಣಾ ನದಿಯ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಹೊಸ ನೀರು ನದಿಯಲ್ಲಿ ಸೇರ್ಪಡೆಗೊಳ್ಳುತ್ತಿದೆ.
ಹೊಸ ನೀರು ನದಿಯಲ್ಲಿ ಸೇರ್ಪಡೆಗೊಳ್ಳುವುದರಿಂದ ನೀರಿನಲ್ಲಿ ಗಡಸುತನ, ಕಂಡಕ್ಟಿವಿಟಿ ಮತ್ತು ಬಿ.ಡಿ.ಎಸ್ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಪಟ್ಟಣದ ಜನತೆಗೆ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಎಂದು ಪ.ಪಂ ಮುಖ್ಯಾದಿಕಾರಿ ಉಮೇಶ ಚಲವಾದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.