ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಯೋಗ ಸಹಕಾರಿ: ಕುಲಪತಿ ಡಾ. ಪಿ. ಎಲ್. ಪಾಟೀಲ
ವಿಜಯಪುರ,ಜು.19:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕರು ವಿವಿಧ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಇದರಲ್ಲಿ ಕೆಲವೊಬ್ಬರು ಮಾತ್ರ ತೇರ್ಗಡೆ ಹೊಂದುತ್ತಾರೆ. ಉತ್ತಮ ಹುದ್ದೆ ಪಡೆಯಲು ಏಕಾಗ್ರತೆ ಮುಖ್ಯವಾಗಿದೆ. ಇದನ್ನು ಯೋಗದಿಂದ ಮತ್ತು ಧ್ಯಾನದಿಂದ ಸಾಧಿಸÀಬಹುದಾಗಿದೆ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ ಕರೆ ನೀಡಿದರು.
ಗೆಜ್ಜಿ ಕರಿಯರ್ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪರೀಕ್ಷೆ ಎಂಬ ಹಬ್ಬಕ್ಕೆ ಯೋಗ ಮತ್ತು ಧ್ಯಾನ ಎಂಬ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಎಲ್ಲ ಪರೀಕ್ಷೆಗಳಂತೆ ಕೃಷಿ ಅಧ್ಯಯನ ಕೂಡಾ ಒಂದು ಅತ್ಯುತ್ತಮ ವಿಷಯವಾಗಿದ್ದು, ವಿಜ್ಞಾನವನ್ನು ಐಚ್ಚಿಕ ವಿಷಯವನ್ನಾಗಿ ಓದಿದವರು. ಕೃಷಿಯಲ್ಲಿ ಮತ್ತು ಕೃಷಿ ಸಂಬಂಧಿತ ಕೋರ್ಸ್‍ಗಳನ್ನು ಅಧ್ಯಯನ ಮಾಡಬಹುದು. ಇಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿ ರೈತರ ಮಕ್ಕಳೇ ಆಗಿದ್ದು, ಅವರಿಗೆ ಕೃಷಿ ಪದವಿ ವ್ಯಾಸಂಗಕ್ಕೆ ಶೇ. 50 ರಷ್ಟು ಸೀಟುಗಳು ಲಭ್ಯವಿರುತ್ತವೆ ಎಂದರು.
ಇಲ್ಲಿ ಪದವಿ ಪಡೆದ ಅನೇಕ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ, ಅನೇಕ ನಾಗರಿಕ ಸೇವೆಗಳಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿಂದಿನ ವಿದ್ಯಾಧಿಕಾರಿ ಡಾ. ಹೆಚ್. ಬಿ. ಬಬಲಾದ ಮಾತನಾಡಿ, ಇಂದು ಕಷ್ಟಪಟ್ಟು ಓದಿದರೆ ಜೀವನ ಪೂರ್ತಿ ನೆಮ್ಮದಿಯಾಗಿ ಇರಬಹುದು. ಅದಕ್ಕಾಗಿ ತಾವೆಲ್ಲರೂ ತಮಗೆ ಮಾರ್ಗದರ್ಶನ ನೀಡಿದ ಶಿಕ್ಷಕರ ಸಲಹೆಯನ್ನು ತಪ್ಪದೇ ಪಾಲಿಸಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಕಾತ್ರಾಳ ಬಾಲಗಾಂವ ಆಶ್ರಮದ ಅಮೃತಾನಂದ ಸ್ವಾಮಿಜಿ ಮಾತನಾಡಿ, ಯೋಗವು ಭಾರತೀಯರ ಶ್ರೇಷ್ಠ ಕೊಡುಗೆಯಾಗಿದ್ದು, ಅದೊಂದು ವಿಜ್ಞಾನವಾಗಿದೆ. ಋಷಿಮನಿಗಳು ಅನೇಕ ವರ್ಷಗಳವರೆಗೆ ತಪಸ್ಸುಗೈದು, ಅದನ್ನು ನಮಗೆಲ್ಲರಿಗೂ ಕೊಟ್ಟಿರುವರು. ಅದರಲ್ಲಿ ಅನೇಕ ವಿಸ್ಮಯಗಳಿವೆ. ಒಂದು ವೇಳೆ ತಾರುಣ್ಯದಲ್ಲಿಯೇ ನಾವು ಯೋಗ ಸಾಧನೆಯನ್ನು ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಖಂಡಿತವಾಗಿ ಯಶಸ್ಸನ್ನು ಸಾಧಿಸಬಹುದಾಗಿದೆ ಎಂದರು.
ಒಂದು ತಿಂಗಳ ಕಾಲ ಯೋಗ ತರಬೇತಿ ಹಮ್ಮಿಕೊಂಡಿರುವ ಬಿ.ಎಲ್.ಡಿ.ಈ. ಡೀಮ್ಡ್ ವಿವಿ ಯೋಗ ಶಿಕ್ಷಕ ಮಡಿವಾಳಪ್ಪ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ. ಭೀಮಪ್ಪ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಗೆಜ್ಜಿ ಕರಿಯರ್ ಅಕಾಡೆಮಿ ಸಂಸ್ಥಾಪಕ ಸುರೇಶ ಗೆಜ್ಜಿ ಸೇರಿದಂತೆ 750 ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳು ಇತ್ತೀಚೆಗೆ ಮೊಬೈಲ್ ಗೀಳಿಗೆ ತುತ್ತಾಗಿ ಗಂಭೀರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಹೊರಬರಲು ಪಾಲಕರು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದ ಸಸ್ಯಗಳ ಬಳಕೆ ಬಗ್ಗೆ ತಿಳುವಳಿಕೆ ನೀಡಬೇಕೆಂದು ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಪ್ರಗತಿಪರ ರೈತ ಮತ್ತು ಆಯುರ್ವೆದ ತಜ್ಞ ಕಿವಿಮಾತು ಹೇಳಿದರು.
ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಮಕ್ಕಳ ಭವಿಷ್ಯಕ್ಕಾಗಿ ಆಯುರ್ವೆದ ಬಳಕೆ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದು ವಾತಾವರಣ ಬದಲಾವಣೆಯಿಂದ ಮಕ್ಕಳು ಶೀತ, ಕೆಮ್ಮು, ಜ್ವರ ಹಾಗೂ ಡೆಂಘೀಯಂತಹ ಕಾಯಿಲೆಗಳಿಂದ ಬಳಲುತ್ತಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗುತ್ತಿದೆ. ಪಾಲಕರು ಮಕ್ಕಳಿಗೆ ಮನೆಯಲ್ಲಿ ಯೋಗ, ಪ್ರಾಣಾಯಮ ಅಭ್ಯಾಸ ಮಾಡಿಸಬೇಕು. ಸಾವಯವ ಕ್ರಮಗಳನ್ನಳವಡಿಸಿ ಬೆಳೆದ ದ್ವಿದಳ ಧಾನ್ಯ ಮೊಳಕೆ ಕಾಳುಗಳನ್ನು ಕೊಡಬೇಕು. ಮಕ್ಕಳು ಸದೃÀಢರಾಗಿದ್ದಾಗ ಮಾತ್ರ ಅವರು ವಿದ್ಯಾವಂತರಾಗುತ್ತಾರೆ, ಜ್ಞಾನವಂತರಾಗುತ್ತಾರೆ ಮತ್ತು ಈ ದೇಶದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಡಾ. ರವೀಂದ್ರ ಬೆಳ್ಳಿ, ಮುಖ್ಯ ಗುರುಮಾತೆ ಚೈತ್ರಾ ಗುಳೇದಗುಡ್ಡ, ಶಿಕ್ಷಕಿಯರಾದ ಕೀರ್ತಿ ಚಿಮ್ಮಲಗಿ, ವಿದ್ಯಾ ನರಸರಡ್ಡಿ, ಜಗದೀಶ ಕಾಶಿನಕುಂಟೆ, ಕಾಶಿಬಾಯಿ ಪಾಟೀಲ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.